ಸುದ್ದಿ

ಬಂಡೀಪುರ ರಸ್ತೆಯಲ್ಲಿ ಅಡ್ಡನಿಂತ ಒಂಟಿಸಲಗ: ಸಾಲುಗಟ್ಟಿನಿಂತ ವಾಹನಗಳು

Share It

ಗುಂಡ್ಲುಪೇಟೆ: ಒಂಟಿಸಲಗವೊAದು ರಸ್ತೆಯಲ್ಲಿ ಅಡ್ಡನಿಂತ ಪರಿಣಾಮವಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುವ ಪ್ರಕರಣ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ರಾಷ್ಟಿçÃಯ ಹೆದ್ದಾರಿಗೆ ನುಗ್ಗಿದ ಒಂಟಿಸಲಗ ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿಯೇ ನಿಂತುಕೊAಡಿದೆ. ಇದರ ಪರಿಣಾಮವಾಗಿ ಊಟಿ, ಮೈಸೂರು, ಕೇರಳದಿಂದ ಆಗಮಿಸುವ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ.

ಆನೆಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಪಟಾಕಿ ಸಿಡಿಸಿ ಆನೆಯನ್ನು ಆಚೆಗಟ್ಟಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಆನೆ ಅರಣ್ಯ ಸಿಬ್ಬಂದಿಯ ಯಾವುದೇ ಪ್ರಯತ್ನಕ್ಕೆ ಬಗ್ಗುತ್ತಿಲ್ಲ ಎನ್ನಲಾಗುತ್ತಿದೆ.


Share It

You cannot copy content of this page