ಆರೋಗ್ಯ ಸುದ್ದಿ

ಮಲೆನಾಡಿನಲ್ಲಿ ಶುರುವಾಯ್ತು ಮಂಗನ ಕಾಯಿಲೆಯ ಭೀತಿ

Share It

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಮತ್ತೇ ಆರಂಭವಾಗಿದ್ದು, ಕಾಫಿನಾಡಿನಲ್ಲಿ ಮತ್ತೊಂದು ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಬಳಿಯ ಮತ್ತಿಖಂಡ ಗ್ರಾಮದ 24 ವರ್ಷದ ಯುವಕನಿಗೆ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿತ್ತು. ಆತನನ್ನು ಚಿಕ್ಕಮಳಗೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಆತನಿಗೆ ಮಂಗನ ಕಾಯಿಲೆಯಿರುವುದು ದೃಢಪಟ್ಟಿದೆ.

ರಕ್ತಪರೀಕ್ಷೆಯಲ್ಲಿ ಮಂಗನ ಕಾಯಿಲೆ ಇರುವುದು ದೃಢವಾದ ನಂತರ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ, ನೀಡಿ ಗ್ರಾಮಸ್ಥರಿಗೆ ಕಾಡಿಗೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಗ್ರಾಮಸ್ಥರಿಗೆ ಡಿಎಂಪಿಎ ತೈಲ ವಿತರಣೆ ಮಾಡಿರುವ ಸಿಬ್ಬಂದಿ, ಅನಾರೋಗ್ಯಕ್ಕೆ ತುತ್ತಾಗಿರುವ ವ್ಯಕ್ತಿಗಳ ಸ್ಯಾಂಪಲ್ಸ್ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ ಸೋಂಕು ದೃಢಪಟ್ಟಿರುವ ಯುವಕನನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


Share It

You cannot copy content of this page