ಕ್ರೀಡೆ ಸುದ್ದಿ

RCB ತಂಡಕ್ಕೆ ಆಂಗ್ಲ ಆಟಗಾರ್ತಿ ಎಂಟ್ರಿ: ತಂಡದ ಸ್ಟಾರ್ ಆಟಗಾರ್ತಿ ಔಟ್

Share It

ಬೆಂಗಳೂರು: 2025 ರ ಮಹಿಳಾ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ 18 ಜನರ ತಂಡಕ್ಕೆ ಹೊಸ ಆಟಗಾರ್ತಿಯನ್ನು ಟ್ರೇಡ್ ಮಾಡಿಕೊಂಡಿದೆ.

ಕಳೆದ ಸೀಸನ್ ನಲ್ಲಿ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೊಲಿನಿಯಕ್ಸ್ ತಂಡದಿಂದ ಹೊರಗೆ ಉಳಿದಿದ್ದಾರೆ. ಮೊಲಿನಿಯಕ್ಸ್ಗೆ ಕಾಲಿನ ಗಾಯದಿಂದ ಈ ಬಾರಿಯ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗೆ ಉಳಿದ್ದಾರೆ. ಅವರ ಬದಲಿಗೆ ಇಂಗ್ಲೆಂಡ್ ನ ಚಾರ್ಲಿ ಡೀನ್ ಅನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಚಾರ್ಲಿ ಡೀನ್ ಕಳೆದ ಬಾರಿ ತಮ್ಮ ಮೂಲ ಬೇಕೆಯಾದ 30 ಲಕ್ಷಕ್ಕೆ ಹರಾಜಿಗೆ ಬಂದಿದ್ದರು. ಆದರೆ ಯಾವುದೇ ತಂಡಗಳು ಚಾರ್ಲಿ ಡೀನ್ ಅನ್ನು ಕೊಂಡುಕೊಳ್ಳಲು ಆಸಕ್ತಿ ತೋರಿರಲಿಲ್ಲ. ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಯ್ಕೆ ಮಾಡಿಕೊಂಡಿದೆ.

೨೪ ವರ್ಷದ ಚಾರ್ಲಿ ಡೀನ್ ಇಂಗ್ಲೆಂಡ್ ಹಾಗೂ ಲಂಡನ್ ಸ್ಪಿರಿಟ್ ತಂಡಕ್ಕೆ ಆಡುತ್ತಿದ್ದಾರೆ. ಇವರು ಉತ್ತಮ ಆಲ್ರೌಂಡರ್ ಆಗಿದ್ದು ಆರ್ ಸಿಬಿ ತಂಡದ ಕೈ ಹಿಡಿಯುವ ಭರವಸೆ ಇದೆ. ಇದು ಅವರ ಮೊದಲ ಐಪಿಎಲ್ ಸೀಸನ್ ಆಗಲಿದೆ. ಈವರೆಗೆ ಒಟ್ಟು 36 ಟಿ 20 ಪಂದ್ಯಗಳಲ್ಲಿ ತನ್ನ ಬೌಲಿಂಗ್ ನಿಂದ 46 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಜೊತೆಗೆ 12 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ 137 ರನ್ ಗಳನ್ನು ಕಲೆಹಾಕಿದ್ದಾರೆ.

ನಮ್ಮ ಬೆಂಗಳೂರು ತಂಡ ಹೀಗಿದೆ :

ಮಾಮೂಲಿಯಂತೆ ನಾಯಕ್ತವನ್ನು ಸ್ಮೃತಿ ಮಂದಾನ ವಹಿಸಿದ್ದಾರೆ. ತಂಡದಲ್ಲಿ ಆಲ್ರೌಂಡರ್ ಗಳಾದ ರಿಚಾ ಘೋಷ್, ಸೋಫಿ ಡಿವೈನ್, ಶ್ರೇಯಾಂಕಾ ಪಾಟೀಲ್, ಎಲ್ಲಿಸ್ ಪೆರ್ರಿ, ಚಾರ್ಲಿ ಡೀನ್ ಪ್ರಮುಖವಾಗಿ ಇರಲಿದ್ದಾರೆ.

ತಂಡದಲ್ಲಿ ಜಾರ್ಜಿಯಾ ವೇರ್‌ಹ್ಯಾಮ್, ರೇಣುಕಾ ಸಿಂಗ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಆಶಾ ಸೊಭಾನಾ, ಡೇನಿಯಲ್ ವ್ಯಾಟ್, ಜಾಗರವಿ ಪವಾರ್, ಏಕ್ತಾ ಬಿಷ್ತ್, ಕನಿಕಾ ಅಹುಜಾ, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘವಿ ಬಿಸ್ತ್ ಇದ್ದಾರೆ.


Share It

You cannot copy content of this page