ಕ್ರೀಡೆ ಸುದ್ದಿ

ಟೀಂ ಇಂಡಿಯಾಗೆ ಆನೆ ಬಲ: ಭರ್ಜರಿ ಕಂ ಬ್ಯಾಕ್ 

Share It

ವರ್ಡ್ ಕಪ್ ಟು ವರ್ಡ್ ಕಪ್

2025 ರ ಚಾಂಪಿಯನ್ ಟ್ರೋಫಿ ಗೆ ಭಾರತ ತಂಡ ತನ್ನ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. 2023 ರ ಕಹಿ ನೆನಪನ್ನು ಮರೆತು ವಿಶ್ವ ಚಾಂಪಿಯನ್ಸ್ ಪಟ್ಟವೇರುವ ಸಾಮರ್ಥ್ಯ ಟೀಂ ಇಂಡಿಯಾ ಗೆ ಇದೆ ಎಂದು ಕ್ರೆಕೆಟ್ ಜಗತ್ತು ಲೆಕ್ಕಾಚಾರ ಹಾಕಿದೆ. ಸುಮಾರು 2 ವರ್ಷದ ಬಳಿಕ ಮತ್ತೆ ಟೀಮ್ ಇಂಡಿಯಾಗಿ ಕಮ್ ಬ್ಯಾಕ್ ಶಮಿ ಕಂ ಬ್ಯಾಕ್ ಮಾಡಿದ್ದಾರೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಭಾರತ ಹೈ ಬ್ರೀಡ್ ಮಾದರಿಯಲ್ಲಿ ದುಬೈ ಅಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಆಡಲಿದೆ.

ಮೊಹಮ್ಮದ್ ಶಮಿ ಕಳೆದ 2023 ರ ವಿಶ್ವ ಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಿ ತಂಡ ಫೈನಲ್ಸ್ ತಲುಪುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದರು. ವಿಶ್ವ ಕಪ್ ಸೋತ ಬೆನ್ನಲ್ಲೇ ಗಾಯದ ಸಮಸ್ಯೆಯಿಂದಾಗಿ ಬೇರೆ ಯಾವ ಸರಣಿಯಲ್ಲಿ ಕಾಣಿಸಿಕೊಳ್ಳಲಿಲ್ಲ. 

ಸದ್ಯ ಶಮಿ ಸಂಪೂರ್ಣವಾಗಿ ಫಿಟ್ ಆಗಿದ್ದು ಚಾಂಪಿಯನ್ ಟ್ರೋಫಿ ಗು ಮುನ್ನ ಇಂಗ್ಲೆಂಡ್ ವಿರುದ್ಧ ನಡೆಯುವ ಟಿ20 ಹಾಗೂ ಏಕದಿನ ಸರಣಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಗೆ ವರ್ಮ್ ಆಫ್ ಪಂದ್ಯಗಳು ಎಂದೇ ಹೇಳಬಹುದು.

ಭಾರತದ ತಂಡ ಹೀಗಿದೆ: ರೋಹಿತ್ ಶರ್ಮಾ -ನಾಯಕ, ಶುಭಮನ್ ಗಿಲ್ -ಉಪನಾಯಕ,  ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ,ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಹಾರ್ದಿಕ್ ಪಾಂಡ್ಯ,ಅರ್ಷದೀಪ್ ಸಿಂಗ್, ರಿಷಭ್ ಪಂತ್,  ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ. 


Share It

You cannot copy content of this page