ಬೆಂಗಳೂರು: ಕಾಂಗ್ರೆಸ್ ಸುದೀರ್ಘ ಕಾಲ ಭಾರತವನ್ನಾಳಿದ ರಾಷ್ಟ್ರೀಯ ಪಕ್ಷ. ಸ್ವಾತಂತ್ರ ಬಂದಾಗಿನಿAದ ೮೦ರ ದಶಕದವರೆಗೆ ಕಾಂಗ್ರೆಸ್‌ಗೆ ಪರ್ಯಾಯ ಎಂಬುದೇ ಇರಲಿಲ್ಲ. ಆದರೆ, ಇದೀಗ ದೆಹಲಿಯಲ್ಲಿ ಕಾಂಗ್ರೆಸ್ ಮೂರನೇ ಬಾರಿಗೆ ಶೂನ್ಯ ಸಾಧನೆ ಮಾಡಿದೆ.
1998 ರಿಂದ 2013ರವರೆಗೆ ಕಾಂಗ್ರೆಸ್ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದು, 2013 ರಿಂದ ಈವರೆಗೆ ಸತತವಾಗಿ ಸೋಲುವ ಮೂಲಕ ಹ್ಯಾಟ್ರಿಕ್ ಭಾರಿಸಿದೆ. ಎಎಪಿಯ ಓವರ್ ಕಾನ್ಫಿಡೆನ್ಸ್ನಿಂದಾಗಿ ಮೈತ್ರಿ ಮುರಿದುಕೊಂಡು, ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿತು.
ಅಂತೆಯೇ ದೆಹಲಿಯ ಸುಮಾರು 12 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಗೆಲುವನ್ನು ಕಾಂಗ್ರೆಸ್ ಕಸಿದುಕೊಂಡಿದೆ ಎಂದೇ ಹೇಳಬಹುದು. ಇದು ಬಿಜೆಪಿಗೆ ಅನುಕೂಲವಾಗಿದೆಯೇ ಹೊರತು ಕಾಂಗ್ರೆಸ್ ಸ್ವತಂತ್ರವಾಗಿ ಗೆಲ್ಲಲು ಸಾಧ್ಯವಾಗಿಲ್ಲ.
ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿರುವುದರ ಹಿಂದಿರುವ ಕಾರಣವೇನು ಎಂಬುದನ್ನು ನೋಡಿದರೆ, ದೆಹಲಿಯ ಮತದಾರರಿಗೆ ಸೂಕ್ತ ಭರವಸೆ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಆಮ್ ಆದ್ಮಿ ಮೂರು ಬಾರಿ ಹುಟ್ಟಿಸಿದ್ದ ಭರವಸೆಯಲ್ಲಿ ಕೊಂಚ ಏರುಪೇರಾಗಿದ್ದರೂ, ಕಾಂಗ್ರೆಸ್ ಅಂತಹ ಸ್ಥಿತಿಯನ್ನು ತಲುಪಲು ಸಾಧ್ಯವೇ ಆಗಿಲ್ಲ.
ಇನ್ನು ಕೇಂದ್ರದಲ್ಲಿ ಬಿಜೆಪಿ ಸರಕಾರ, ನರೇಂದ್ರ ಮೋದಿ ಅವರ ಆಡಳಿತ ಕಾಂಗ್ರೆಸ್ ಕಡೆಗೆ ದೆಹಲಿ ಮತದಾರ ನೋಡದಂತೆ ಮಾಡಿದೆ ಎನ್ನಬಹುದು. ದೆಹಲಿ ಮತಗಳಿಗೆ ಮತ್ತು ಆಮ್ ಆದ್ಮಿಯ ಸೋಲಿಗೆ ಕಾರಣವಾಗಿರುವ ಅಂಶಗಳನ್ನು ಗಮನಿಸದರೆ, ಮುಂದೆ ಪಕ್ಷ ಸಂಘಟನೆ ಸರಿಯಾದ ದಾರಿಯಲ್ಲಿ ನಡೆದರೆ, ಪಕ್ಷಕ್ಕೆ ಭವಿಷ್ಯವಿದೆ ಎಂಬುದು ಭಾಸವಾಗುತ್ತದೆ. ಅಂತಹ ಪ್ರಯತ್ನ ಕಾಂಗ್ರೆಸ್ ನಾಯಕರಿಂದ ಆಗಬೇಕಿದೆ.