ಧಾರವಾಡ: ಅನೈತಿಕ ಸಂಬಂಧದ ಅನುಮಾದಲ್ಲಿ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಬನಶ್ರೀ ನಗರದಲ್ಲಿ ವಾಸವಾಗಿದ್ದ ಯಲ್ಲವ್ವ ಎಂಬಾಕೆಯನ್ನು ಆಕೆಯ ಪತಿ ಬಸವರಾಜ ಅವ್ವಣ್ಣವರ್ ಕೊಲೆ ಮಾಡಿದ್ದಾನೆ. ಈತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಪತಿ-ಪತ್ನಿ ನಡುವೆ ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪತ್ನಿ ಯಲ್ಲವ್ವ ತನ್ನ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ತವರು ಮನೆಗೆ ಹೋಗಿ ಒಂದು ವಾರವಾದರೂ ವಾಪಸ್ ಬರದ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದ ಬಸವರಾಜ್ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಈ ವೇಳೆ ಚಾಕುವಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆ ಗಂಭೀರ ಗಾಯಗೊಂಡಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಜತೆಗೆ ಜಗಳ ಬಿಡಿಸಲು ಬಂದ ಆತನ ಅತ್ತೆಯ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.