ಸೊಳ್ಳೆ ಸೃಷ್ಟಿಸುವ ಕೊಳಕು ಪರಿಸರ ಹೊಂದಿದ್ದರೆ ಹುಷಾರ್ : ನಿಮಗೆ ಬೀಳಲಿದೆ ಭಾರಿ ದಂಡ !
ಬೆಂಗಳೂರು: ಮಾರಕ ಖಾಯಿಲೆಗಳನ್ನು ಹರಡುವ ಸೊಳ್ಳೆಗಳ ಸೃಷ್ಟಿಯಾಗುವಂತಹ ಪರಿಸರ ಸೃಷ್ಟಿಸುವ ನಗರದ ನಾಗರಿಕರಿಗೆ ಇನ್ಮುಂದೆ ಭಾರಿ ಪ್ರಮಾಣದ ದಂಡ ಬೀಳುವ ಸಾಧ್ಯತೆಗಳಿವೆ.
ಇಂತಹದ್ದೊAದು ಕಠಿಣ ನಿಲುವು ತೆಗೆದುಕೊಳ್ಳುವಂತೆ ಹೈಕೋರ್ಟ್ ಸರಕಾರಕ್ಕೆ ಸೂಚಿಸಿದ್ದು, ಯಾವುದೇ ವ್ಯಕ್ತಿ, ವಸತಿ ಸಮುಚ್ಛಯಗಳು ಸಂಗ್ರಹವಾಗುವ ನೀರಿ, ಘನತ್ಯಾಜ್ಯವನ್ನು ತೆರವುಗೊಳಿಸಲು ನಿರ್ಲಕ್ಷö್ಯವಹಿಸಿದರೆ, ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಸೂಕ್ತ ನಿಯಮಗಳನ್ನು ರೂಪಿಸುವ ಮೂಲಕ ಭಾರಿ ದಂಡ ವಿಧಿಸಬೇಕು ಎಂದು ಹೈಕೋರ್ಟ್ ಸರಕಾರಕ್ಕೆ ಸಲಹೆ ನೀಡಿದೆ.
ಕಳೆದ ವರ್ಷದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿತ್ತು. ಈ ಅರ್ಜಿಯ ವಿಚಾರಣೆ ನಡೆಸಿ, ಅದನ್ನು ಇತ್ಯರ್ಥಪಡಿಸಿದ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಡೆಂಘಿ ಹರಡಲು ಸೊಳ್ಳೆಗಳ ಸಂತಾನೋತ್ಪತ್ತಿಯೇ ಪ್ರಾಥಮಿಕವಾಗಿರುವ ಕಾರಣದಿಂದ ಸೊಳ್ಳೆಗಳ ಸಂತಾನೋತ್ಪತಿ ಪರಿಶೀಲಿಸಲು ಮತ್ತು ನಿಯಂತ್ರಿಸಲು ಬಿಬಿಎಂಪಿ ನಿರಂತರ ಕಾರ್ಯವಿಧಾನಗಳನ್ನು ರೂಪಿಸಬೇಕು. ಜತೆಗೆ ವೈದ್ಯಕೀಯ ಸಔಲಭ್ಯಗಳನ್ನು ಒದಗಿಸಲು ಮತ್ತು ರೋಗ ಹರಡುವುದನ್ನು ತಡೆಯಲು ಅಧಿಕಾರಿಗಳು ಪರಿಣಾಮಕಾರಿ ಕೆಲಸ ಮಾಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಜು. 2024 ರ ವೇಳೆಗೆ 5,794 ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಎಂಪಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, 2023 ರ ಇದೇ ಅವಧಿಯಲ್ಲಿ ಈ ಸಂಖ್ಯೆ 2,321 ಅಗಿತ್ತು. ಫೆಬ್ರವರಿಯಿಂದ ಮೇ 2024 ರವರೆಗೆ ನಿರಂತರ ಮಳೆಯಿಂದಾಗಿ, ನಗರದಲ್ಲಿ ಹೆಚ್ಚಿದ ನೀರಿನ ಸಂಗ್ರಹಣೆಯಿAದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು.
ಸೊಳ್ಳೆಗಳ ಸಂತಾನೋತ್ಪತ್ತಿ ಸೇರಿ ಡೆಂಘಿ ಪ್ರಕರಣಗಳೀಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಖ್ಯೆಯನ್ನು 1,200 ರಿಂದ 3,161 ಕ್ಕೆ ಹೆಚ್ಚಿಸಲಾಗಿದೆ. ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಂಡು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 24,90,995 ಮನೆಗಳನ್ನು ಸಮೀಕ್ಷೆ ಮಾಡಲಾಗಿದೆ ಎಂದು ಬಿಬಿಎಂಪಿ ನ್ಯಾಯಾಲಯಕ್ಕೆ ತಿಳಿಸಿದೆ.


