ಉಪಯುಕ್ತ ಸುದ್ದಿ

ಪಿಂಚಣಿ ವಂಚಿತರಿಗೆ ಗುಡ್ ನ್ಯೂಸ್ : ಬಿಟಿಎಂ ಲೇಔಟ್ ಶಾಸಕರ ಕಚೇರಿಯಲ್ಲಿ ಅದಾಲತ್

Share It


ಬೆಂಗಳೂರು: ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಸಲುವಾಗಿ ಬಿಟಿಎಂ ಲೇಔಟ್ ಶಾಸಕರಾದ ರಾಮಲಿಂಗಾ ರೆಡ್ಡಿ ಅವರ ಕಚೇರಿಯಲ್ಲಿ ಪಿಂಚಣಿ ಅದಾಲತ್ ಆಯೋಜನೆ ಮಾಡಲಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಅದಾಲತ್ ನಲ್ಲಿ ಸರಕಾರದ ವಿವಿಧ ಯೋಜನೆಯ ಅರ್ಜಿಗಳನ್ನು ಪಡೆದು, ಸ್ಥಳದಲ್ಲಿಯೇ ಅದಕ್ಕೆಲ್ಲ‌ ಪರಿಹಾರ ಕೊಡಿಸುವ ಪ್ರಯತ್ನ ನಡೆಸಲಾಗುತ್ತದೆ.

ಅದಾಲತ್ ನಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು ಹಾಗೂ ಬಿಟಿಎಂ ಲೇಔಟ್ ಶಾಸಕರಾದ ರಾಮಲಿಂಗಾ ರೆಡ್ಡಿ, ಬೆಂಗಳೂರು ಉಪವಿಭಾಗಾಧಿಕಾರಿಗಳು, ಬೆಂಗಳೂರು ದಕ್ಷಿಣ ತಹಸೀಲ್ದಾರ್ ಅವರು ಸ್ಥಳದಲ್ಲಿಯೇ ಭಾಗವಹಿಸಲಿದ್ದಾರೆ.

ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಮಾಸಾಶನಕ್ಕೆ ಅರ್ಜಿ ಪಡೆದು, ಅವುಗಳನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಮಾಡಲಾಗುತ್ತದೆ.

ಕೋರಮಂಗಲದ 5 ನೇ ಹಂತದ ಶಾಸಕರ ಕಚೇರಿಯ ಆವರಣದಲ್ಲಿ ಅದಾಲತ್ ನಡೆಯಲಿದೆ. ಬೆಳಗ್ಗೆ11 ರಿಂದ ಸಂಜೆ 5 ರವರೆಗೆ ಸಚಿವರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದು, ಪಿಂಚಣಿ ದಾರರ ದೂರುಗಳನ್ನು ಆಲಿಸಲಿದ್ದಾರೆ.


Share It

You cannot copy content of this page