ಸೂರ್ಯನಿಗಿಂತ 500 ಪಟ್ಟು ಪ್ರಕಾಶಮಾನ ಆಕಾಶಕಾಯ ಪತ್ತೆ! ಭೂಮಿಗೆ ಕಾದಿದ್ಯಾ ಗಂಡಾಂತರ?

Share It

ನಮ್ಮಲ್ಲಿ ಬಹುತೇಕ ಮಂದಿ ಅತ್ಯಂತ ಪ್ರಕಾಶಮಾನ ಆಕಾಶ ಕಾಯ ಯಾವುದು ಎಂದು ಕೇಳಿದರೆ ಸೂರ್ಯ ಎಂದು ಹೇಳುತ್ತಾರೆ. ಅದೂ ಈವರೆಗೆ ನಿಜ ಸಂಗತಿಯಾಗಿತ್ತು. ಆದ್ರೆ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ (ESO) ವೆರಿ ಲಾರ್ಜ್ ಟೆಲಿಸ್ಕೋಪ್ (VLT) ಅನ್ನು ಬಳಸಿಕೊಂಡು ಖಗೋಳ ಶಾಸ್ತ್ರಜ್ಞರು ಕ್ವೇಸರ್ ಅನ್ನೋ ಪ್ರಕಾಶಮಾನವಾದ ವಸ್ತುವನ್ನು ಪತ್ತೆ ಮಾಡಿದ್ದಾರೆ.

ನಮ್ಮ ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ಇವುಗಳು ಬಹಳಷ್ಟು ಸಹಕಾರಿಯಾಗುತ್ತವೆ. ನಮ್ಮ ಬ್ರಹ್ಮಾಂಡದ ಉಗಮಕ್ಕೂ ಇವಕ್ಕೂ ತಾಳೇ ಮಾಡುವ ಕೆಲಸಗಳು ನಡೆಯುತ್ತಿವೆ. ಆದ್ದರಿಂದ ಇವುಗಳ ಅಧ್ಯಯನವು ಅತ್ಯಂತ ಪ್ರಮುಖವೆನಿಸುತ್ತದೆ.

ವಿಜ್ಞಾನಿಗಳು ಕಂಡುಹಿಡಿದಿರುವ ಈ ಕ್ವೇಸರ್ ಸೂರ್ಯನಿಗಿಂತ 500 ಪಟ್ಟು ಹೆಚ್ಚು ಪ್ರಕಾಶಮಾನದಿಂದ ಕೂಡಿದೆ. ಇದರ ಮಧ್ಯದಲ್ಲಿ ಕಪ್ಪುಕುಳಿಗಳು ಇವೆ. ಕ್ವೇಸರ್ ಗಳು ಗ್ಯಾಲಕ್ಸಿಯ ಅತ್ಯಂತ ಪ್ರಕಾಶಮಾನ ವಸ್ತುವಾಗಿದ್ದು. ಇವುಗಳ ಮಧ್ಯದಲ್ಲಿ ಧೂಳಿನ ಕಣಗಳು ಮತ್ತು ಅನಿಲಗಳಿಂದ ವಿದ್ಯುತ್ ಕಾಂತೀಯತೆ ಉಂಟಾಗಿ ಪ್ರಕಾಶಮಾನವಾದ ಕಿರಣಗಳನ್ನು ಉತ್ಪಾದಿಸುತ್ತದೆ ಎಂದು ನ್ಯೂಸ್‌ವೀಕ್ ವರದಿ ಮಾಡಿದೆ.

ಸದ್ಯ ಪತ್ತೆಯಾಗಿರುವ ಈ ಕ್ವೇಸರ್ ನಿತ್ಯ ಸೂರ್ಯನ ಗಾತ್ರದಲ್ಲಿ ಬೆಳೆಯುತ್ತಿದೆ. ಸೂರ್ಯನಿಗಿಂತ 500 ಟ್ರಿಲಿಯನ್ ಪಟ್ಟು ಹೆಚ್ಚು ಪ್ರಕಾಶಮಾನವಾಗಿದೆ. ಈ ಕ್ವೇಸರ್ ವಿಜ್ಞಾನಿಗಳು J0529-4351 ಎಂಬ ಹೆಸರನ್ನು ಸೂಚಿಸಿದ್ದಾರೆ. ಈ ಹಿಂದೆ ಇದ್ದ ಮಾಹಿತಿ ಪ್ರಕಾರ ಕಪ್ಪು ಕುಳಿಯು ಹೆಚ್ಚು ವೇಗವಾಗಿ ಬೆಳೆಯುತ್ತಿತ್ತು. ಕಪ್ಪು ಕುಳಿಯು 17 ಶತಕೋಟಿ ಸೂರ್ಯನ ದ್ರವ್ಯ ರಾಶಿಯನ್ನು ಹೊಂದಿದೆ ಎಂದು ಹೇಳಾಗಿದೆ.

ಅಷ್ಟಕ್ಕೂ ಈ ಕ್ವೇಸರ್ ನ ಬೆಳಕು ಭೂಮಿಗೆ ತಲುಪಲು 12 ಶತಕೋಟಿ ವರ್ಷಗಳನ್ನು ತೆಗೆದುಕೊಂಡಿದೆ. ಇವುಗಳನ್ನು ಭೂಮಿಯಿಂದ ನೋಡಿದಾಗ ನಕ್ಷತ್ರಗಳಂತೆ ಕಾಣುತ್ತವೆ.1980 ರಿಂದ ಈ ಕ್ವೇಸರ್ ಗೋಚರಿಸುತ್ತಿದೆ. ಮೊದಲು ಇದನ್ನು ಕ್ವೇಸರ್ ಅಥವಾ ಅಲ್ಲವಾ ಎಂಬ ಚರ್ಚೆ ನಡೆದಿತ್ತು. ಕಾರಣ ಇದು ಹೆಚ್ಚು ಪ್ರಕಾಶಮಾನವಾಗಿದಿದ್ದು.

ಸಂಶೋಧಕರು ಈ ಸ್ಥಳವನ್ನು ಬಹುಶಃ ಬ್ರಹ್ಮಾಂಡದ ಅತ್ಯಂತ ನರಕ ಸ್ಥಳ ಎಂದು ಹೇಳುತ್ತಿದ್ದಾರೆ. ಇಲ್ಲಿ ವಿಪರೀತ ಬಿಸಿಯುಳ್ಳ ಮೋಡಗಳು, ಮಿಂಚುಗಳು ಅತಿಯಾದ ಬೆಳಕು ತುಂಬಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.


Share It

You May Have Missed

You cannot copy content of this page