ಮುಂಬಯಿ: ತನ್ಮ ಪ್ರೆಂಡ್ ಶಿಪ್ ಪ್ರಮೋಸಲ್ ಒಪ್ಪದ ಮೊದಲ ವರ್ಷದ ವಿದ್ಯಾರ್ಥಿನಿಗೆ ನಾಲ್ವರು ಹಿರಿಯ ವಿದ್ಯಾರ್ಥಿಗಳು ಸೇರಿ ದೌರ್ಜನ್ಯ ಎಸಗಿದ ಘಟನೆ ಮುಂಬಯಿ ಮಹಾನಗರದಲ್ಲಿ ನೆಡೆದಿದೆ.
18 ವರ್ಷದ ಮೊದಲ ವರ್ಷದ ಬಿಬಿಎ ವಿದ್ಯಾರ್ಥಿನಿಗೆ ಕಾಲೇಜಿನ ಕೆಲ ಹಿರಿಯ ವಿದ್ಯಾರ್ಥಿಗಳು ಪ್ರೆಂಡ್ ಶಿಪ್ ಮಾಡಿಕೊಳ್ಳುವಂತೆ ಪ್ರಪೋಸ್ ಮಾಡಿದ್ದರು. ವಿದ್ಯಾರ್ಥಿನಿ ಅದನ್ನು ನಿರಾಕರಿಸಿದ್ದಳು.
ಇದರಿಂದ ಕೋಪಗೊಂಡ ಹಿರಿಯ ವಿದ್ಯಾರ್ಥಿಗಳು ನಾಲ್ವರು ಗುಂಪುಗೂಡಿ, ಕಾಲೇಜು ಸಮೀಪದ ಸಬ್ ಅರ್ಬನ್ ರೈಲು ನಿಲ್ದಾಣಕ್ಕೆ ಆಗಮಿಸಿ, ಅಲ್ಲಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಆಕೆಯನ್ನು ಎಳೆದಾಡಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪೊಲೀಸರು ನಾಲ್ವರು ವಿದ್ಯಾರ್ಥಿಗಳ ಮೇಲೆ ಎಫ್ ಐಆರ್ ದಾಖಲು ಮಾಡಿದ್ದು, ಈ ನಾಲ್ವರು ವಿದ್ಯಾರ್ಥಿಗಳು ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.
ಜನನಿಬಿಡ ರೈಲ್ವೇ ನಿಲ್ದಾಣದಲ್ಲಿ ನಾಲ್ವರು ಸೇರಿ ಆಕೆಯನ್ನು ಎಳೆದಾಡಿ, ಹೊಡೆಯುತ್ತಿದ್ದರು, ಯಾವೊಬ್ಬ ಪ್ರಯಾಣಿಕರು ಸಹಾಯಕ್ಕೆ ಧಾವಿಸಿಲ್ಲ ಎನ್ನಲಾಗಿದೆ. ಈ ನಡುವೆ ಮಹಿಳಾ ಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

