ನಮಗೆಲ್ಲ ತಾಯಿಯೇ ದೇವ್ರು! ಆದ್ರೆ ತಾಯಿಯನ್ನೇ ತಿಂದು ಮುಗಿಸುವ ಜೀವಿ ಯಾವುದು ಗೊತ್ತಾ?
ತಾಯಿ ದೇವರಿಗೆ ಸಮಾನ ಎಂಬ ಭಾವನೆ ಮನುಷ್ಯರಲ್ಲಿ ಇದೆ. ಕೆಲ ಬಾರಿ ಮನುಷ್ಯ ಕ್ರೂರಿಯಾದರು ಪ್ರಾಣಿಗಳು ತನ್ನ ತಾಯಿಯನ್ನು ಗೌರವಿಸುತ್ತದೆ. ಮಗು ಹುಟ್ಟಿದ ತಕ್ಷಣ ತಾಯಿ ಎದೆ ಹಾಲನ್ನು ಬಯಸುತ್ತದೆ. ಆದ್ರೆ ಇಲ್ಲೊಂದು ಜೀವಿ ತಾನು ಹುಟ್ಟಿದ್ದ ತಕ್ಷಣ ತನ್ನ ತಾಯಿಯನ್ನೇ ಕೊಲ್ಲುತ್ತದೆ. ಅಷ್ಟಕ್ಕೂ ಈ ಜೀವಿ ಯಾವುದು ಎಂದು ನೋಡೋಣ ಬನ್ನಿ.
ಚೇಳು ತಾನು ಹುಟ್ಟಿದ ತಕ್ಷಣ ತನ್ನ ತಾಯಿಯನ್ನು ಬಲಿ ತೆಗೆದುಕೊಳ್ಳುವ ಜೀವಿಯಾಗಿದೆ. ಇದು ಹೆಚ್ಚು ವಿಷವನ್ನು ಹೊಂದಿರುವ ಪ್ರಾಣಿಗಳಲ್ಲಿ ಒಂದಾಗಿದ್ದು ತುಸು ಎಚ್ಚರ ತಪ್ಪಿದರೇ ಮನುಷ್ಯನ ಜೀವಕ್ಕೆ ಕುತ್ತು ತರುವಷ್ಟು ವಿಷವನ್ನು ಹೊಂದಿರುತ್ತದೆ.
ಚೇಳುಗಳು ತಮಗಿಂತ ಚಿಕ್ಕದಾದ ಸಣ್ಣ ಪುಟ್ಟ ಕೀಟಗಳನ್ನು ಬೇಟೆ ಆಡಿ ಜೀವಂತವಾಗಿರುವಾಗಲೇ ಅದನ್ನು ತಿಂದು ಮುಗಿಸುತ್ತವೆ. ಹೆಣ್ಣು ಚೇಳು ಒಂದೇ ಬಾರಿಗೆ ಸುಮಾರು 100 ಮರಿಗಳಿಗೆ ಜನ್ಮವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಮರಿಗಳು ಜನ್ಮ ಪಡೆದ ನಂತರ ತಾಯಿಯ ಬೆನ್ನಿಗೆ ಸಾಲಾಗಿ ಅಂಟಿಕೊಳ್ಳುತ್ತವೆ. ಅವುಗಳು ತಮ್ಮ ಆಹಾರಕ್ಕಾಗಿ ತಾಯಿಯನ್ನೇ ಬಳಸುತ್ತವೆ. ಮರಿಗಳು ತಿಂದು ಮುಗಿಸಿ ತಾಯಿಯು ಸತ್ತ ಮೇಲೆ ಅದರ ದೇಹದ ಮಾಂಸ ಖಾಲಿಯಾದ ಮೇಲೆ ಬೇರ್ಪಟ್ಟು ಸ್ವತಂತ್ರವಾಗಿ ಬದಕಲು ಶುರು ಮಾಡುತ್ತವೆ.
ಬಹುಶಃ ಈ ಜೀವಿಗಳು ಮಾತ್ರ ತನ್ನ ತಾಯಿಯನ್ನೇ ತಿಂದು ಬೆಳೆಯಬಹುದು ಎಂದು ಕಾಣುತ್ತದೆ. ತಾಯಿಯು ತನ್ನ ಮಕ್ಕಳಿಗಾಗಿ ತನ್ನ ಜೀವವನ್ನೇ ಕೊಡುತ್ತಾಳೆ ಎಂಬುದು ಇದರಿಂದ ಗೊತ್ತಾಗುತ್ತದೆ.


