18ನೇ ಆವೃತ್ತಿಯ ಐಪಿಎಲ್ ಗೆ ಎಲ್ಲಾ ತಂಡಗಳೂ ಸಹ ತಮ್ಮದೇ ಆದ ತಂತ್ರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ತಂಡಗಳ ರೀಟೆಂಷನ್ ಪಟ್ಟಿ ಪ್ರಕಟವಾಗಲಿದೆ.
ಈ ರೀಟೆಂಷನ್ ವಿಚಾರವಾಗಿ ಮಾಹಿತಿ ಹಂಚಿಕೊಂಡ ಮುಂಬೈ ಇಂಡಿಯನ್ಸ್ ತಂಡ, ” ನಾವು ರೀಟೈನ್ ಮಾಡಿಕೊಳ್ಳುವಲ್ಲಿ ಮೊದಲ ಆದ್ಯತೆ ನೀಡುವುದು ಯಾವುದೇ ಬ್ಯಾಟ್ಸಮನ್ ಗೆ ಅಲ್ಲ ಅದು ನಮ್ಮ ಬೌಲರ್ ಬೂಮ್ರಾಗೆ” ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.
ಹೌದು ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಪ್ಲೇಯರ್ಸ್ ಗಳ ದಂಡೇ ಇದೆ. ಈ ಕಾರಣದಿಂದ ಮುಂಬೈ ಇಂಡಿಯನ್ಸ್ ನ ಅಭಿಮಾನಿಗಳಲ್ಲಿ 2025 ರ ಐಪಿಎಲ್ ಗೆ ಯಾವ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು ಎಂಬ ಅನುಮಾನಗಳು ಎಲ್ಲರಲ್ಲೂ ಮನೆ ಮಾಡಿತ್ತು.
ಎಲ್ಲರೂ ಸಹ ಮುಂಬೈ ಇಂಡಿಯನ್ಸ್ ನ ಮೊದಲ ಆದ್ಯತೆ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ, ಅಥವಾ ಸೂರ್ಯಕುಮಾರ್ ಯಾದವ್ ಆಗಿರುತ್ತಾರೆ ಎಂದುಕೊಂಡಿದ್ದರು. ಆದರೆ ಅಭಿಮಾನಿಗಳ ಈ ಎಲ್ಲಾ ಅನುಮಾನಗಳಿಗೆ ಈಗ ತೆರೆ ಬಿದ್ದಿದೆ. ಮುಂಬೈ ಇಂಡಿಯನ್ಸ್ ಪರ ಮೊದಲ ಆಟಗಾರನಾಗಿ ವೇಗಿ ಜಸ್ಪ್ರೀತ್ ಬೂಮ್ರ ರೀಟೈನ್ ಆಗಲಿದ್ದಾರೆ.
ಪ್ರಸ್ತುತ ಜಸ್ಪ್ರೀತ್ ಬೂಮ್ರ ಅವರು ತಮ್ಮ ಕ್ರಿಕೆಟ್ ಜೀವನದ ಉತ್ತುಂಗದ ಫಾರ್ಮ್ ನಲ್ಲಿರುವ ಕಾರಣ ಯಾವುದೇ ಕಾರಣಕ್ಕೂ ಸಹ ಮುಂಬೈ ಇಂಡಿಯನ್ಸ್ ತಂಡ ಅವರನ್ನು ಕಳೆದುಕೊಳ್ಳುವುದಿಲ್ಲ.