ಬಾಂಗ್ಲಾದೇಶದ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಸೂರ್ಯ ಕುಮಾರ್ ಯಾದವ್ ನಾಯಕತ್ವದ 15 ಜನರ ತಂಡ ಒಂದನ್ನು ಇಂದು ಪ್ರಕಟಿಸಿದೆ. ಈ ತಂಡದಲ್ಲಿ ಹಲವಾರು ಯುವ ಪ್ರತಿಭೆಯುಳ್ಳ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಕಳೆದ ಬಾರಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಸೂರ್ಯ ಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ 3-0 ಅಂತರದಲ್ಲಿ ಗೆದ್ದು ಬೀಗಿತ್ತು. ಅದೇ ರೀತಿ ಈ ಬಾರಿಯೂ ಸಹ ಐಪಿಎಲ್ ನಲ್ಲಿ ಮತ್ತು ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ.
ಈ ಸರಣಿ ಅಕ್ಟೋಬರ್ 6 ರಿಂದ ಗ್ವಾಲಿಯರ್ ನಲ್ಲಿ ಪ್ರಾರಂಭವಾಗಲಿದೆ. ತಂಡದ ವಿಶೇಷತೆ ಏನೆಂದರೆ ಕಳೆದ ಸರಣಿಯಲ್ಲಿ ಹೊಡಿಬಡಿ ಆಟದ ಶೈಲಿಯ ಮೂಲಕ ಶತಕ ಬಾರಿಸಿ ಮಿಂಚಿದ್ದ ಅಭಿಷೇಕ್ ಶರ್ಮ ಮತ್ತೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಿತೀಶ್ ಕುಮಾರ್ ರೆಡ್ಡಿ ಮತ್ತು 150 ಕಿ.ಮೀ ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಿದ ಮಯಂಕ್ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ತಂಡದ ವಿಕೆಟ್ ಕೀಪರ್ ಗಳಾಗಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮ ಆಡಲಿದ್ದಾರೆ. ಬಾಲಿಂಗ್ ವಿಭಾಗದಲ್ಲಿ ಹರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮಯಂಕ್ ಯಾದವ್, ಹರ್ಷಿತ್ ರಾಣ, ರವಿ ಬಿಷ್ನೋಯಿ ಸ್ಥಾನ ಪಡೆದುಕೊಂಡಿದ್ದಾರೆ.
ತಂಡ ಹೀಗಿದೆ :
ಸೂರ್ಯ ಕುಮಾರ್ ಯಾದವ್ (ನಾಯಕ )
ಅಭಿಷೇಕ್ ಶರ್ಮ
ಹಾರ್ದಿಕ್ ಪಾಂಡ್ಯ
ರಿಂಕು ಸಿಂಗ್
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ರಿಯಾನ್ ಪರಾಗ್
ಶಿವಂ ದುಬೆ
ನಿತೀಶ್ ಕುಮಾರ್ ರೆಡ್ಡಿ
ವಾಷಿಂಗ್ಟನ್ ಸುಂದರ್
ರವಿ ಬಿಷ್ನೋಯಿ
ವರುಣ್ ಚಕ್ರವರ್ತಿ
ಹರ್ಷದೀಪ್ ಸಿಂಗ್
ಮಯಂಕ್ ಯಾದವ್
ಹರ್ಷಿತ್ ರಾಣ