ಸುದ್ದಿ

ಗಣೇಶ್ ಚತುರ್ಥಿ ಹಬ್ಬಕ್ಕೆ ಮುಸ್ಲೀಂ ಬಾಂಧವರಿಗೆ ಆಹ್ವಾನ : ಹಿಂದೂ & ಮುಸ್ಲಿಂ ಒಂದೇ ಭಾಯ್ ಭಾಯ್ ರಾಜಾ ತಿಮ್ಮಪ್ಪ ನಾಯಕ

Share It

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ನಗರದ ಕಾಳಿಕಾದೇವಿ ದೇವಸ್ಥಾನದ ಪಕ್ಕದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಚತುರ್ಥಿ ಆಚರಣೆಗೆ ಮುಸ್ಲಿಂ ಬಾಂಧವರನ್ನು ಆಹ್ವಾನಿಸಿ

ಹಿಂದೂ ಮುಸ್ಲಿಂ ಭಾಯ್ ಭಾಯ್ ಎಂಬ ಧ್ಯೆಯ ವಾಕ್ಯದೊಂದಿಗೆ ಗಣೇಶ ಹಬ್ಬ ಆಚರಣೆ ಮಾಡಲಾಯಿತು.

ವಿಶೇಷವೆನೆಂದರೆ ಸುಮಾರು ವರ್ಷಗಳಿಂದಲೂ ಹಿಂದೂ,ಮುಸ್ಲಿಂ ಬಾಂಧವರು ಸೇರಿಕೊಂಡು ಗಣೇಶ ಹಬ್ಬವನ್ನಾ ಆಚರಣೆ ಮಾಡುತ್ರಾರೆ.

ಗಣೇಶ ಹಬ್ಬ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ರಾಷ್ಟ್ರೀಯ ಟಿಪ್ಪು ಸುಲ್ತಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಅರ್ಷದ್ ದಖನಿ ಅವರು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಸುರಪುರ ರಾಜಾ ಮನೆತನದ ಬಹರಿ ಬಲವಂತ ಬಹದ್ದೂರ್ ಸಂಸ್ಥಾನ ಸುರಪುರ ರಾಜರಾದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಕಾಲದಿಂದಲೂ ಯಾವುದೇ ಜಾತಿ ವರ್ಗದವರಿಗೆ ಒಂದೊಂದು ಜವಾಬ್ದಾರಿ ಕೊಟ್ಟು ಭೂಮಿಯನ್ನಾ ಇನಾಮಿ ನೀಡಿರತಕ್ಕಂತ ಸಾಕಷ್ಟು ಉದಾಹರಣೆಗಳಿವೆ.

ಮೌಜಂಪುರ ಗಜಾನನ ಸಮಿತಿಯ ವಿಶೇಷವೆಂದರೆ ಒಂದು ಕಡೆ ಮಹಾಕಾಳಿ ಕಾಳಿಕಾ ದೇವಿ ದೇವಸ್ಥಾನ ಮತ್ತೊಂದೆಡೆ ವಲಿಸಾಬ್ ದರ್ಗಾ ಇರುವುದೇ ವಿಶೇಷ,
ಈ ಒಂದು ಏರಿಯಾದಲ್ಲಿ ಪ್ರತಿಯೊಂದು ಹಬ್ಬವನ್ನು ಹಿಂದೂ ಮುಸ್ಲಿಂ ಕೂಡಿಕೊಂಡು ಹಬ್ಬಗಳನ್ನು ಆಚರಣೆ ಮಾಡುವುದು ವಾಡಿಕೆಯಾಗಿದೆ ಎಂದರು.

ಗಜಾನನ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಮುತ್ಸದ್ಧಿ ರಾಜಾ ತಿಮ್ಮಪ್ಪ ನಾಯಕ, ಬಾಬು ದೊರೆ, ಅವರು ಮುಸ್ಲಿಂ ಮುಖಂಡರಿಗೆ ಆಹ್ವಾನ ನೀಡಿ ಶಾಲು ಸನ್ಮಾನ ಮಾಡಿ ಮಾನವೀಯತೆ ಮೆರೆದರು ಹಿಂದೂ ಮುಸ್ಲಿಂ ನಾವೆಲ್ಲಾ ಅಣ್ಣಾ ತಮ್ಮಂದಿರು ಎಂದರು.
ಈ ಸಂದರ್ಭದಲ್ಲಿ ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ವೇಣು ಮಾಧವ್ ನಾಯಕ, ಪ್ರಭು ಪತ್ತಾರ, ವಿಜಯಕುಮಾರ್ ಹಳಿಸಗರ, ರಾಹುಲ್ ಹಳಿಸಗರ್, ಸಿದ್ಧು ಚೌವ್ಹಾಣ್, ಪ್ರವೀಣ್ ನಾಯಕ, ಮನೋಹರ ನಾಯಕ, ಅರವಿಂದ ಧನ್ನು, ಅಣ್ಣಯ್ಯ ಸ್ವಾಮಿ, ಪ್ರಜ್ವಲ್ ಶಹಾಪೂರಕರ್ ಹಾಗೂ ಗಜಾನನ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋಯಿ.


Share It

You cannot copy content of this page