ಬೆಂಗಳೂರು: ಬೋಳು ತಲೆಯ ಬಗ್ಗೆ ಗೇಲಿ ಮಾಡುವುದು ಕೂಡ ಲೈಂಗಿಕ ದೌರ್ಜನ್ಯಕ್ಕೆ ಸಮ ಎಂದು ಲಂಡನ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬ್ರಿಟನ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೋಳು ತಲೆಗೆ ಅವರ ಬಾಸ್ ತಮಾಷೆ ಮಾಡಿದ್ದು ಮಾತ್ರವಲ್ಲದೆ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಬೇಸರಗೊಂಡ ವ್ಯಕ್ತಿ 2021 ರಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸತತ ಹೋರಾಟದ ಬಳಿಕ ಕೋರ್ಟ್ ಉದ್ಯೋಗಿ ಪರ ತೀರ್ಪನ್ನು ನೀಡಿದ್ದು, ಬೋಳು ತಲೆ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆ ಬಗ್ಗೆ ತಮಾಷೆ ಮಾಡಕೂಡದೂ ಎಂದು ನ್ಯಾಯಾಲಯ ಬಾಸ್‌ಗೆ ಕ್ಲಾಸ್ ತೆಗೆದುಕೊಂಡಿದೆ.
ಪುರುಷರ ಬೋಳು ತಲೆ ಬಗ್ಗೆ ಗೇಲಿ ಮಾಡುವುದು ಮಹಿಳೆಯರ ಸ್ತನದ ಬಗ್ಗೆ ತಮಾಷೆ ಮಾಡುವುದಕ್ಕೆ ಸಮಾನವಾದ್ದದ್ದು, ಆದ್ದರಿಂದ ಬೊಕ್ಕ ತಲೆ ಬಗ್ಗೆ ತಮಾಷೆ ಮಾಡಬಾರದು, ಇದು ಕೂಡಾ ಲೈಗಿಂಕ ದೌರ್ಜನ್ಯ ಎಂದು ಬ್ರಿಟನ್ ಹೈ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ ಬೊಕ್ಕ ತಲೆಯ ಮಂದಿಗೆ ಕಾನೂನಿನ ಬಲ ಸಿಕ್ಕಂತಾಗಿದ್ದು, ಭಾರತದಲ್ಲೂ ಮುಂದೆ ಇಂತಹ ಬೋಳು ತಲೆಯ ಮೇಲಿನ ದೌರ್ಜನ್ಯಕ್ಕೆ ಕೇಸು ಹಾಕುವ ಕಾಲ ಬರಬಹುದು.