ಉಪಯುಕ್ತ ಸುದ್ದಿ

ಇಂದು ರಕ್ಷಾ ಬಂಧನ ಹಬ್ಬ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರಿಂದ್ದ ಶುಭಾಶಯ.

Share It

ಬೆಂಗಳೂರು: ಇಂದು ರಕ್ಷಾ ಬಂಧನ ಹಬ್ಬ, ಈ ಹಬ್ಬವನ್ನು ಶ್ರಾವಣ ಮಾಸದ ಪೌರ್ಣಿಮೆಯಂದು ದೇಶ ಹಾಗೂ ನಾಡಿನದ್ಯಂತ ಸಂಭ್ರಮದಿಂದ್ದ ಆಚರಿಸುತ್ತಾರೆ. ತಮ್ಮ ಸಹೋದರ ಸಹೋದರಿಯರ ನಡುವೆ, ಪ್ರೀತಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಆಚರಿಸಲ್ಪಡುತ್ತದೆ ಸಹೋದರ ಹಾಗೂ ಸಹೋದಿಯರ ಪರಸ್ಪರ ಭ್ರಾತೃತ್ವದ ಭಾವನೆಯನ್ನು, ಗೆಟ್ಟಿಗೊಳಿಸುವ ಹಬ್ಬ ಇದಾಗಿದೆ.

ಈ ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿ, ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು, ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೀತಿಯನ್ನು ಗಟ್ಟಿಗೊಳಿಸುವ ಸಂಕಲ್ಪವೇ ಈ ರಕ್ಷಾ ಬಂಧನ ಹಬ್ಬ.
ಇತ್ತ ರಕ್ಷಾ ಬಂಧನ ಹಬ್ಬದ ಅಂಗವಾಗಿ ಇಂದು
ನಾಡಿನ ಸಹೋದರ ಮತ್ತು ಸಹೋದರಿಯರ ಸಹೋದರತ್ವದ ಸಂಕೇತವಾಗಿ ಆಚರಿಸಲ್ಪಡುವ ರಕ್ಷಾ ಬಂಧನ ಮನುಷ್ಯ ಸಂಬಂಧಗಳನ್ನು ಸೌಹಾರ್ದತೆ, ಸಹಬಾಳ್ವೆಯೊಂದಿಗೆ ಬೆಸೆಯಲಿ.

ಹಾಗೇ ವಿಶ್ವಮಾನವತ್ವದ ಸಂದೇಶ ನಿಜ ಅರ್ಥದಲ್ಲಿ ಆಚರಣೆಗೆ ಬರಲಿ ಎಂದು ಹಾರೈಸುತ್ತಾ
ನಾಡಿನ ಸಮಸ್ತ ಜನತೆಗೆ ರಕ್ಷಾಬಂಧನದ ಶುಭಾಶಯಗಳನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಶುಭ ಕೋರಿದ್ದಾರೆ.


Share It

You cannot copy content of this page