ಗೌರಿ ಹಬ್ಬದ ದಿನದಂದು ಮದುವೆ ಮಾಡಿ ಕೊಟ್ಟ ಮಗಳು ತವರು ಮನೆಗೆ ಬಂದು ಬಾಗಿನ ತೆಗೆದುಕೊಳ್ಳುವುದು ಸಂಪ್ರದಾಯ. ಅದರಲ್ಲೂ ನಮ್ಮ ಹೆಣ್ಣು ಮಕ್ಕಳು ಈ ಹಬ್ಬವನ್ನು ಹೆಚ್ಚು ಇಷ್ಟ ಪಟ್ಟು ಆಚರಣೆ ಮಾಡುತ್ತಾರೆ. ಆಗಿದ್ರೆ ಗೌರಿ ಹಬ್ಬದ ದಿನ ಈ ವಸ್ತುಗಳನ್ನು ದಾನ ಮಾಡಿದ್ರೆ ನಿಮಗೆ ಫಲಗಳು ದೊರೆಯುತ್ತವೆ. ಆ ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ.
ಹೊಸದಾಗಿ ಮದುವೆಯಾದ ಗಂಡು ಹೆಣ್ಣುಗಳು ಸಹ ಈ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಗೌರಿಯನ್ನು ಬಹಳ ಶ್ರದ್ಧೆಯಿಂದ ಪೂಜೆ ಮಾಡಿದರೆ ನಮ್ಮ ಕಷ್ಟಗಳು ಪರಿಹಾರವಾಗುತ್ತವೆ. ಜೊತೆಗೆ ನಮ್ಮ ಸಂಸಾರ ಆನಂದವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಅನ್ನದಾನ
ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ಆಕುವುದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ. ನೀವು ತಪ್ಪದೇ ಗೌರಿ ಹಬ್ಬದ ದಿನದ ಒಂದಷ್ಟು ಮಂದಿಗೆ ಊಟವನ್ನು ಹಾಕಿ. ಒಂದು ವೇಳೆ ಸಾಧ್ಯವಾಗದಿಂದದ್ರೆ ಅಕ್ಕಿಯನ್ನ ದಾನ ಮಾಡಬಹುದು. ಇದರಿಂದಾಗಿ ಪರಮಾತ್ಮನ ಅನುಗ್ರಹ ದೊರೆಯುತ್ತದೆ.
ಬಟ್ಟೆಗಳು
ಹಬ್ಬಗಳಲ್ಲಿ ಹೊಸ ಬಟ್ಟೆಗಳನ್ನು ತೊಡುವುದು ಪದ್ದತಿ. ಹಾಗೇ ನಾವು ಹೊಸ ಬಟ್ಟೆಗಳನ್ನು ದಾನ ಮಾಡುವುದರಿಂದ ನಮ್ಮ ಜಾತಕದಲ್ಲಿರುವ ವಿವಿಧ ದೋಷಗಳಿಗೆ ಪರಿಹಾರ ದೊರೆಯುತ್ತದೆ. ನಮ್ಮ ಗುರು ಬಲವು ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಹಣ್ಣುಗಳು
ಫಲಗಳನ್ನು ನೀವು ಅವಶ್ಯಕತೆ ಇರುವವರಿಗೆ ದಾನ ಮಾಡಿದರೆ ಅದರಿಂದ ಸಾಕಷ್ಟು ನೆಮ್ಮದಿ ದೊರೆಯುತ್ತದೆ. ಅದನ್ನು ಪಡೆದವರು ಮಾಡುವ ಆಶೀರ್ವಾದ ದೇವರಿಗಿಂತ ದೊಡ್ಡದು.
ಉದ್ದಿನ ಬೆಳೆ
ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಹೆಚ್ಚು ಕಷ್ಟಗಳನ್ನು ಅನುಭವಿಸುತ್ತಿದ್ದರೆ ಉದ್ದಿನ ಬೆಳೆಯನ್ನ ದಾನ ಮಾಡಿರಿ. ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ.
ಗೋಧಿ ಮತ್ತು ಕಡಲೇ ಬೆಳೆ
ಹಬ್ಬದ ದಿನ ಹಲವರು ವಿವಿಧ ಆಚರಣೆಗಳನ್ನು ಮಾಡುತ್ತಾರೆ. ಕೆಲವರು ಉಪವಾಸ ಮಾಡುತ್ತಾರೆ. ನೀವು ಉಪವಾಸ ಮಾಡಿ ಗೌರಿಯನ್ನು ಪೂಜೆ ಮಾಡಿದರೆ ತಪ್ಪದೇ ಗೋಧಿಯನ್ನು ದಾನವಾಗಿ ನೀಡಿ. ಇದರ ಜೊತೆಗೆ ಕಡಲೇ ಬೆಳೆಯನ್ನು ಬಾಗಿನದ ಜೊತೆಗೆ ಕೊಡುವುದು ನಿಮಗೆ ಸಾಕಷ್ಟು ಲಾಭ ತಂದು ಕೊಡುತ್ತದೆ.

