ರಾಷ್ಟ್ರ ರಾಜಧಾನಿಗೆ ಲಗ್ಗೆ ಇಟ್ಟ ನಂದಿನಿ: ಪ್ರತಿನಿತ್ಯ 1ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಇಟ್ಟ ದೆಹಲಿ ಸರ್ಕಾರ
ಬೆಂಗಳೂರು: ಗುಣಮಟ್ಟದ ಹಾಲು ಪೂರೈಕೆಗೆ ಹೆಸರುವಾಸಿಯಾಗಿರುವ ನಂದಿನಿ ರಾಜ್ಯ ಮಾತ್ರವಲ್ಲದೇ ನೆರೆ ರಾಜ್ಯದಲ್ಲೂ ಹೆಸರು ಪಡೆದಿದೆ. ಅದರ ಮುಂದುವರಿದ ಭಾಗವಾಗಿ ದೆಹಲಿ ಸರ್ಕಾರ ಪ್ರತಿನಿತ್ಯ 1ಲಕ್ಷ ಲೀಟರ್ ಹಾಲು ಪೂರೈಕೆ ಮಾಡುವಂತೆ ಮನವಿ ಮಾಡಿದೆ.
ನಂದಿನಿ ಬ್ರ್ಯಾಂಡ್ನ ಟೆಟ್ರಾ ಪ್ಯಾಕ್ ಹಾಲನ್ನು ನಮ್ಮ ದೇಶದ ಸೈನಿಕರಿಗೂ ಸರಬರಾಜು ಮಾಡಲಾಗುತ್ತಿದೆ. ದೆಹಲಿಗೆ ಹತ್ತಿರದಲ್ಲಿರುವ ಗುಜರಾತ್ ರಾಜ್ಯದ ಅಮುಲ್ ಹಾಲು, ಮದರ್ ಡೇರಿಯ ಹಾಲನ್ನು ದೆಹಲಿಗೆ ಸರಬರಾಜು ಮಾಡಲಾಗುತ್ತಿದೆ. ಈಗ ದೆಹಲಿ ಸರ್ಕಾರದಿಂದಲೂ ಕೆಎಂಎಪ್ನ ನಂದಿನಿ ಹಾಲಿಗೆ ಡಿಮ್ಯಾಂಡ್ ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮುಲ್ ಹಾಗೂ ಮದರ್ ಡೇರಿ ಹಾಲನ್ನು ಹಿಂದಿಕ್ಕಿ ತನ್ನದೇ ದಾಖಲೆ ಬರೆಯಲು ಕರ್ನಾಟಕದ ನಂದಿನಿ ಹಾಲು ಸಿದ್ಧಗೊಂಡಿದೆ. ಮುಂದಿನ ತಿಂಗಳು ಅಕ್ಟೋಬರ್ನಿಂದ ದೆಹಲಿಯಲ್ಲಿ ಹಾಲು ಹಾಗೂ ಮೊಸರು ಮಾರಾಟಕ್ಕೆ ಸಜ್ಜಾಗಿದೆ.


