ನವದೆಹಲಿ : ಬರೋಬ್ಬರಿ 10 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಲಾಗಿತ್ತು. ಈಗ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇಂದು ವೇಳಾಪಟ್ಟಿ ಬಿಡುಗಡೆ ಗೊಳಿಸಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿರುವ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ” ಜಮ್ಮು ಕಾಶ್ಮೀರ ಮತ್ತು ಹರಿಯಾಣದ ವಿಧಾನಸಭೆ ಚುನಾವಣೆ ಘೋಷಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಮೂರು ಹಂತದ ಚುನಾವಣೆ ನಡೆಸಲಾಗುತ್ತದೆ. ಸೆ. 8, ಸೆ.15 ಮತ್ತು ಅಕ್ಟೋಬರ್ 1 ರಂದು ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ. ಅಕ್ಟೋಬರ್ 4 ಫಲಿತಾಂಶ ಪ್ರಕಟವಾಗಲಿದೆ ಎಂದರು.”
ಒಟ್ಟು 90 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು ಅಮರನಾಥ ಯಾತ್ರೆ ಬಳಿಕ ಅಕ್ಟೋಬರ್ 20 ರೊಳಗೆ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸುಮಾರು 87 ಲಕ್ಷ ಮತವನ್ನು ಚಲಾಯಿಸುವ ಸಾಧ್ಯತೆ ಇದೆ.
ಇನ್ನೂ ಹರಿಯಾಣದಲ್ಲಿ ಅಕ್ಟೋಬರ್ 1 ರಿಂದ ಚುನಾವಣೆ ನಡೆಯಲಿದೆ. ಒಟ್ಟು ಎರಡು ಕೋಟಿ ಮತದಾರರಿದ್ದು ಅ.3 ರಂದು ಫಲಿತಾಂಶ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಒಟ್ಟು ಕ್ಷೇತ್ರಗಳಲ್ಲಿ 74 ಕ್ಷೇತ್ರಗಳು ಸಾಮಾನ್ಯ ಅಭ್ಯರ್ಥಿ, ಎಸ್ಸಿ 7 ಮತ್ತು ಎಸ್ ಟಿ 9 ಇದೆ. ಒಟ್ಟು ಮತದಾರರಲ್ಲಿ 44.46 ಲಕ್ಷ ಪುರುಷರು 42.62 ಲಕ್ಷ ಮಹಿಳೆಯರು ಇದ್ದಾರೆ. ಸುಮಾರು 3.71 ಲಕ್ಷ ಜನ ಮೊದಲ ಬಾರಿಗೆ ಮತ ಚಲಾಯಿಸುವವರಿದ್ದಾರೆ.

