ನಮ್ಮಲಿ ಬಹುತೇಕ ಮಂದಿಗೆ ಪಿತ್ತಜಾನಕಾಂಗದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಸಾಮಾನ್ಯವಾಗಿ ರಾತ್ರಿ ನಾವು ಮಾಡುವ 5 ಕೆಟ್ಟ ಅಭ್ಯಾಸಗಳಿಂದ ಹೆಚ್ಚಿನ ಪ್ರಮಾಣದ ಕೊಬ್ಬು ಸಂಗ್ರಹವಾಗುತ್ತದೆ. ಆದ್ದರಿಂದ ಕೆಲವು ಕೆಟ್ಟ ಅಭ್ಯಾಸಗಳು ನಿಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡಬಹುದು.
ನಿದ್ದೆ ಗೆಡುವುದು :
ರಾತ್ರಿಯಲ್ಲಿ ನಿದ್ದೆ ಗೆಡುವುದರಿಂದ ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಕಾರ್ಟಿಸೋಲ್ ಮತ್ತು ಇನ್ಸುಲಿನ್ನಂತಹ ಹಾರ್ಮೋನ್ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು. ಈ ಎರಡು ಅಂಶಗಳು ಚಯಪಚನ ಕ್ರಿಯೆ ಮತ್ತು ಕೊಬ್ಬಿನ ಅಂಶವನ್ನು ನಿಯಂತ್ರಣ ಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದ ನಿಮ್ಮ ನಿದ್ದೆಯ ಸರಿಯಾದ ನಿರ್ವಹಣೆಯನ್ನು ಮಾಡಿ.
ಊಟದ ಬಳಿಕ ವಾಕಿಂಗ್ ಮಾಡುವುದು
ನೀವು ನಿತ್ಯ ಊಟ ಮಾಡಿದ ಬಳಿಕ ಲಘುವಾಗಿ ನಡಿಗೆ ಮಾಡುವುದು ಅಥವಾ ಸಣ್ಣ ಪುಟ್ಟ ವ್ಯಾಯಾಮ ಮಾಡುವುದರಿಂದ ನಿಮ್ಮ ಆರೋಗ್ಯವನ್ನು ಸುಧಾರಣೆ ಮಾಡಬಹುದಾಗಿದೆ. ಪಿತ್ತ ಜನಕಾಂಗ ಕೆಲಸಕ್ಕೂ ಸಹಕಾರಿಯಾಗಲಿದೆ.
ಅತಿಯಾದ ಮದ್ಯಸೇವನೆ
ಮಲಗುವ ಮುನ್ನ ಮದ್ಯವನ್ನು ಸೇವನೆ ಮಾಡುವುದರಿಂದ ನಮ್ಮ ಪಿತ್ತಜನಕಾಂಗದ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲಿ ಕೊಬ್ಬಿನ ಅಂಶ ಶೇಖರಣೆ ಹೆಚ್ಚಿನ ಪ್ರಮಾಣದ ಆಗುತ್ತದೆ. ಅತಿಯಾದ ಸೇವನೆಯಿಂದ ಉರಿಯ ಅನುಭ ಹಾಗೂ ವಿವಿಧ ಕಾಯಿಲೆಗೆ ಕಾರಣವಾಗಬಹುದು.
ಅನಿಯಂತ್ರಿತ ಮಧುಮೇಹ
ನಿಮ್ಮ ದೇಹದಲ್ಲಿ ಮಧುಮೇಹದ ಸಮಸ್ಯೆಯು ಪೀತ ಕೋಶದ ಮೇಲೆ ಅಧಿಕ ಪರಿಣಾಮವನ್ನು ಬೀರುತ್ತದೆ. ಮಧುಮೇಹ ಕಡಿಮೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ.
ಮಾನಸಿಕ ಒತ್ತಡ
ನೀವು ಸದಾ ಒತ್ತಡದಲ್ಲಿ ಇರುವುದರಿಂದ ನಿಮ್ಮ ಪಿತ್ತ ಕೋಶದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಒತ್ತಡದ ಬದುಕಿನಿಂದ ತುಸು ಬಿಡುವು ಮಾಡಿಕೊಳ್ಳಿ.

