ಹೊಸದಿಲ್ಲಿ:34 ವರ್ಷದ ಮಹಿಳೆಯೊಬ್ಬರು ರಕ್ತಸಿಕ್ತ ಸ್ಥಿತಿಯಲ್ಲಿ ದಕ್ಷಿಣ ದೆಹಲಿಯ ನಡುರಸ್ತೆಯಲ್ಲಿ ಕಂಡುಬಂದಿದ್ದು, ಸಾಮೂಹಿಕ ಅತ್ಯಾಚಾರದ ಶಂಕೆ ವ್ಯಕ್ತವಾಗಿದೆ.
ಶುಕ್ರವಾರ ತಡರಾತ್ರಿ ಸುಮಾರು 3.30 ರ ಸುಮಾರಿನಲ್ಲಿ ದಕ್ಷಿಣ ದೆಹಲಿಯ ಸರಾಯ್ ಕಾಲೇ ಖಾನ್ ರಸ್ತೆಯಲ್ಲಿ ಬಟ್ಟೆಯೆಲ್ಲ ರಕ್ತವಾಗಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪೊಲೀಸರು ಆಕೆಯನ್ನು ರಕ್ಷಣೆ ಮಾಡಿದಾಗ ಆಕೆಯ ಮೈಮೇಲೆ ಹರಿದ ಕುರ್ತಾ ಮತ್ತು ಗುಪ್ತಾಂಗದ ಮೇಲೆ ಒಳುಉಡುಪು ಮಾತ್ರವೇ ಇತ್ತು ಎನ್ನಲಾಗಿದೆ. ಜತೆಗೆ ಆಕೆಯ ಗುಪ್ತಾಂಗದಲ್ಲಿ ಭಾರಿ ರಕ್ತಸ್ರಾವ ಆಗಿರುವುದು ಕಂಡುಬಂದಿದ್ದು, ಮಹಿಳೆ ಪ್ರಾಜ್ಞಾಹೀನ ಸ್ಥಿತಿಯಲ್ಲಿದ್ದರು
ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ ಸಂತ್ರಸ್ತೆ ಒರಿಸ್ಸಾ ಮೂಲದ ಪದವೀಧರೆಯಾಗಿದ್ದು, ನರ್ಸಿಂಗ್ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ದಕ್ಷಿಣ ದೆಹಲಿಯನ್ನು ಬಿಟ್ಟಿದ್ದ ಹಾಕಿ ಹಣಕಾಸಿನ ತೊಂಣದರೆಯಲ್ಲಿ ಸಿಲುಕಿದ್ದು, 2 ದಿನದಿಂದ ರಸ್ತೆ ಬದಿಯ ಎಟಿಎಂ ಪಕ್ಕದಲ್ಲಿ ಮಲಗಿದ್ದರು ಎನ್ನಲಾಗಿದೆ.
ಒರಿಸ್ಸಾ ಮೂಲದ ಮಹಿಳೆ ತನ್ನ ಊರನ್ನು ತೊರೆದು ವರ್ಷದ ಹಿಂದೆ ದೆಹಲಿಯಲ್ಲಿ ವಾಸವಿದ್ದರು. ಈ ಬಗ್ಗೆ ಪೋಷಕರು ತಮ್ಮ ಸ್ವಗ್ರಾಮದಲ್ಲಿ ಮಿಸ್ಸಿಂಗ್ ಕಂಪ್ಲೇಟ್ ದೂರು ನೀಡಿದ್ದರು. ಎರಡು ತಿಂಗಳ ಹಿಂದೆ ತಮ್ಮ ಮಗಳು ದೆಹಕಿಯಲ್ಲಿರುವುದು ತಿಳಿದು ಆಕೆಯನ್ನು ವಾಪಸ್ ಮನೆಗೆ ಕರೆಯಲು ಬಂದಿದ್ದರು.
ಪೋಷಕರ ನಿರ್ಧಾರ ಒಪ್ಪದ ಮಹಿಳೆ ತಾನು ಸ್ವತಂತ್ರವಾಗಿ ಜೀವಿಸುವ ಇರಾದೆ ವ್ಯಕ್ತಪಡಿಸಿದ್ದರು. ಅಂತೆಯೇ ಬದುಕುತ್ತಿದ್ದರು. ಆದರೆ, ಆಕೆಯ ಮೇಲೆ ಅತ್ಯಾಚಾರ ನಡೆದಿದ್ಯಾಕೆ? ಅತ್ಯಾಚಾರ ಮಾಡಿದವರು ಯಾರು ಎಂಬೆಲ್ಲ ಮಾಹಿತಿಗಳು ಲಭ್ಯವಾಗಿಲ್ಲ.
ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದು, ಆಕೆಯ ಮೊಬೈಲ್ ಕೂಡ ಕಳವಾಗಿದೆ. ಹೀಗಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು ಯಾರು? ಆಕೆಯ ಮೊಬೈಲ್ ಏನಾಯ್ತು? ಆಕೆಯ ಕುಟುಂಬಸ್ಥರು ಯಾರು? ಎಂಬೆಲ್ಲ ಮಾಹಿತಿಯನ್ನು ಪೊಲೀಸರು ಇನ್ನಷ್ಟೇ ಕಲೆಹಾಕಬೇಕಿದೆ.