ಮುಂಬೈ: ಖ್ಯಾತ ಸ್ಟ್ಯಾಂಡ್ ಅಫ್ ಕಾಮಿಡಿಯನ್ ಮುನಾವರ್ ಫರುಕಿಯನ್ನು ಕೊಲ್ಲಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಂಚು ರೂಪಿಸಿದೆ ಎಂದು ತಿಳಿದು ನಗರದ ಪೊಲೀಸರು ಮುನಾವರ್ ಗೆ ಭದ್ರತೆ ಒದಗಿಸಿದ್ದಾರೆ.
ಮುಂಬೈ ಮೂಲದ ಹಾಸ್ಯ ನಟ ಮುನಾವರ್ ನನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಟಾರ್ಗೆಟ್ ಮಾಡಿದ್ದು, ಅವರ ಹಿಟ್ ಲಿಸ್ಟ್ನಲ್ಲಿದ್ದಾರೆ. ದೆಹಲಿಯ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಸೆಪ್ಟಂಬರ್ ನಲ್ಲಿ ನಡೆದ
ಕಾರ್ಯಕ್ರಮವೊಂದರಲ್ಲಿ ಕೊಲ್ಲಲು ಸಂಚು ರೂಪಿಸಲಾಗಿತ್ತು. ಆದರೆ, ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಲಾವಿದನಿಗೆ ರಕ್ಷಣೆ ಒದಗಿಸಿದರು ಎಂದು ಮೂಲಗಳು ತಿಳಿಸಿವೆ.
ಹಿಂದೂ ದೇವರುಗಳ ವಿರೋಧಿ ಜೋಕ್ ಗಳ ಕಾರಣಕ್ಕೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಸೆಪ್ಟೆಂಬರ್ ತಿಂಗಳಲ್ಲಿ ಫರುಕಿ ಹತ್ಯೆಯ ಕೆಲಸವನ್ನು ನಿಯೋಜಿಸಲಾಗಿತ್ತು. ಹಂತಕರು ಮುನಾವರ್ ಪ್ರಯಾಣಿಸಿದ ವಿಮಾನದಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸಿ ಅದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಗುಪ್ತಚರ ಇಲಾಖೆ ಮಾಹಿತಿಯಿಂದ ಅವರ ಯೋಜನೆ ವಿಫಲವಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.