ರಾಜಕೀಯ ಸುದ್ದಿ

“ರಾಜ್ಯ ಮಹಿಳಾ ಕಾಂಗ್ರೆಸ್ ಗೆ ಸೌಮ್ಯಾ ಸಾರಥಿ”

Share It

ತಂದೆಯ ಹಾದಿಯಲ್ಲಿ ನಡೆಯುತ್ತಿತುವ ಸಂಘಟನಾಗಾರ್ತಿ

ಮಹಿಳಾ ಘಟಕಕ್ಕೆ ಹೊಸ ರೂಪ ಕೊಡುವ ಪಣತೊಟ್ಟ ದಿಟ್ಟೆ

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮಹಿಳಾ ಘಟಕ ಇದೆ ಎಂಬುದು ಅರಿವಿಗೆ ಬಂದಿದ್ದೇ ಇತ್ತೀಚೆಗೆ, ಲಕ್ಷ್ಮೀ ಹೆಬ್ಬಾಳ್ಕರ್, ಪುಷ್ಪಾ ಅಮರ್ ನಾಥ್ ಅಧ್ಯಕ್ಷತೆಯಲ್ಲಿ ಮಹಿಳಾ ಕಾಂಗ್ರೆಸ್ ಒಂದಷ್ಟು ಸದ್ದು ಮಾಡಿತ್ತು. ಇದೀಗ
ಕರ್ನಾಟಕ ಮಹಿಳಾ ಕಾಂಗ್ರೆಸ್ ಸಾರಥ್ಯವನ್ನು ಮಾಜಿ ಶಾಸಕಿ, ಸಂಘಟನಾ ಚತುರೆ ಎನಿಸಿಕೊಂಡಿರುವ ಸೌಮ್ಯಾ ರೆಡ್ಡಿ ಹೆಗಲಿಗೇರಿಸಲಾಗುತ್ತದೆ.

ಸೌಮ್ಯಾ ರೆಡ್ಡಿ ಹುಟ್ಟುತ್ತಲೇ ರಾಜಕೀಯ ಪಡಸಾಲೆಯಲ್ಲಿ ಬೆಳೆದವರು. ತಂದೆ ರಾಮಲಿಂಗಾ ರೆಡ್ಡಿ ಸೌಮ್ಯಾ ಹುಟ್ಟುವ ಮೊದಲೇ ಶಾಸಕರಾಗಿದ್ದವರು. ಸತತ ಎಂಟು ಸಲ ಶಾಸಕರಾಗಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿರುವವರು. ಇಂತಹ ರಾಜಕೀಯ ಹಿನ್ನೆಲೆಯಲ್ಲಿ ಬಂದ ಸೌಮ್ಯಾ ರೆಡ್ಡಿ ಅವರಿಗೆಸಂಘಟನೆ ಹೊಸದಲ್ಲ ಎನ್ನಬಹುದು.

ಮಹಿಳಾ ಕಾಂಗ್ರೆಸ್ ಹೊಸ ಸ್ವರೂಪ ಪಡೆದುಕೊಳ್ಳುವ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಇಡೀ ರಾಜ್ಯದಲ್ಲಿ ಮಹಿಳೆಯರ ಪರವಾದ ಅನೇಕ ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಆ ಯೋಜನೆಗಳು ಮಹಿಳೆಯರಿಗೆ ತಲುಪುತ್ತಿದ್ದರೂ, ಮಹಿಳೆಯರನ್ನು ತಮ್ಮ ಗ್ಯಾರಂಟಿ ಯೋಜನೆಗಳ ಲಾಭದ ಮನವರಿಕೆ ಮಾಡಿಕೊಟ್ಟು, ತನ್ನತ್ತ ಸೆಳೆಯಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸೌಮ್ಯಾ ರೆಡ್ಡಿ ಅವರು, ಹೊಸ ಯೋಜನೆ ರೂಪಿಸಬೇಕಿದೆ.

ಮಹಿಳೆಯರ ಪರವಾದ ಯೋಜನೆಗಳನ್ನು ಮನವರಿಕೆ ಮಾಡಿಕೊಟ್ಟು, ರಾಜ್ಯದ ಮಹಿಳೆಯರಲ್ಲಿ ಕಾಂಗ್ರೆಸ್ ಬಗೆಗಿನ ಧೋರಣೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಹೆಚ್ಚು ಹೆಚ್ಚು ಯುವ ಮಹಿಳಾ ಕಾರ್ಯಕರ್ತರನ್ನು ಸೃಷ್ಟಿಸಿ, ರಾಜಕೀಯ ಪ್ರಜ್ಞೆ ಬೆಳೆಸುವುದು, ರಾಜಕೀಯದಲ್ಲಿ ಧುಮುಕಿ ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತೆ ಪ್ರೇರೇಪಣೆ ಮಾಡುವುದು ಸೌಮ್ಯಾ ರೆಡ್ಡಿ ಅವರ ಮುಂದಿರುವ ಸವಾಲಾಗಿದೆ.

ಅಮೇರಿಕಾದಲ್ಲಿ ವಿದ್ಯಾಭ್ಯಾಸ: ಸೌಮ್ಯಾ ರೆಡ್ಡಿ ಜನಿಸಿದ್ದು, ಮಾರ್ಚ್ 18, 1983 ರಲ್ಲಿ. ತಂದೆ ರಾಮಲಿಂಗಾ ರೆಡ್ಡಿ, ತಾಯಿ ಚಾಮುಂಡೇಶ್ವರಿ, ಅವರು ಮೊದಲಿಗೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ಅನಂತರ ಅವರು ನ್ಯೂಯಾರ್ಕ್ ನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಉನ್ನತ ವ್ಯಾಸಂಗ ಮಾಡಿದರು.

ರಾಜಕೀಯ ರಂಗಪ್ರವೇಶದ ಮೊದಲ ಮೆಟ್ಟಿಲು: ಸೌಮ್ಯಾ ರೆಡ್ಡಿ ಅವರು ವಿದ್ಯಾಭ್ಯಾಸದ ನೆಪದಲ್ಲಿ ರಾಜಕೀಯ ರಂಗದಿಂದ ದೂರವೇ ಉಳಿದಿದ್ದರು. ಅನಂತರ ಅಲ್ಲಲ್ಲಿ ತಂದೆಯ ಪರವಾಗಿ ಪ್ರಚಾರದಲ್ಲಿ ಕಾಣಿಸಿಕೊಳ್ಳುವುದು, ಮಹಿಳೆಯರ ಕಷ್ಟಸುಖಗಳನ್ನು ಆಲಿಸುವುದು ಮಾಡುತ್ತಿದ್ದರು. ಈ ನಡುವೆ ಕೆಲವರು ರಾಜಕೀಯಕ್ಕೆ ಬರಬೇಕು ಎಂಬ ಒತ್ತಾಯವನ್ನು ಮಾಡಿದ್ದರು‌. ಆದರೆ, ಆಸಕ್ತಿವಹಿಸದ ಸೌಮ್ಯಾ ರೆಡ್ಡಿ ತಂದೆಗೆ ಬೆಂಬಲಿಸುವ ಕೆಲಸವನ್ನಷ್ಟೇ ಮಾಡುತ್ತಿದ್ದರು. ಇದು ರಾಜಕೀಯ ರಂಗ ಪ್ರವೇಶದ ಮೊದಲ ಮೆಟ್ಟಿಲಾಯಿತು.

2018 ರಲ್ಲಿ ಆಯ್ಕೆಯಾದ ಬೆಂಗಳೂರಿನ ಏಕೈಕ ಮಹಿಳಾ ಶಾಸಕಿ: 2018 ರ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ ಸ್ಪರ್ಧೆ ಮಾಡಿ, ಬಿಜೆಪಿಯ ಬಿ.ಎನ್. ವಿಜಯ್ ಕುಮಾರ್ ವಿರುದ್ಧ ಜಯಗಳಿಸಿದ್ದರು. ಈ ಅವಧಿಯಲ್ಲಿ ರಾಜಧಾನಿಯಿಂದ ಆಯ್ಕೆಯಾದ ಏಕೈಕ ಮಹಿಳಾ ಶಾಸಕಿ ಎಂದರೆ ಅದು ಸೌಮ್ಯಾ ರೆಡ್ಡಿ, ಸದನದಲ್ಲಿ ಅನೇಕ ಮಹಿಳಾಪರ ಚರ್ಚೆಗಳಲ್ಲಿ ಭಾಗವಹಿಸಿ, ಬಿಜೆಪಿಯ ಮಹಿಳಾ ವಿರೋಧಿ ಧೋರಣೆಯನ್ನು ಖಂಡಿಸಿ, ಮೊದಲ ಅವಧಿಯಲ್ಲಿ ಯೇ ರಾಜ್ಯದ ಗಮನ ಸೆಳೆದ ಶಾಸಕಿಯಾಗಿದ್ದರು.

ಬಿಜೆಪಿ ಭದ್ರಕೋಟೆಯಲ್ಲಿ ಭರ್ಜರಿ ಗೆಲುವು: ಇನ್ನು ಸೌಮ್ಯಾ ರೆಡ್ಡಿ ಗೆಲುವು ಬಿಜೆಪಿ ಭಧ್ರಕೋಡೆ ಎನಿಸಿಕೊಂಡಿದ್ದ ಜಯನಗರದಲ್ಲಿ ಬಂದಿದ್ದು. ಜಯನಗರ ಬ್ರಾಹ್ಮಣರ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರ. ಹೀಗಾಗಿ, ಇಲ್ಲಿ ಬಿಜೆಪಿ ಗೆಲುವು ಅನಾಯಸ ಎಂಬ ಮಾತಿತ್ತು. ಆದರೆ, ಬಿಜೆಪಿಯ ಘಟಾನುಘಟಿ ನಾಯಕ ಬಿ.ಎನ್. ವಿಜಯ್ ಕುಮಾರ್ ಅವರ ವಿರುದ್ಧ ಗೆಲುವು ಸಾಧಿಸಿದ ಸೌಮ್ಯಾ ರೆಡ್ಡಿ ಹೊಸ ದಾಖಲೆ ಬರೆದರು‌.

ಕೋವಿಡ್ ಅವಧಿಯಲ್ಲಿ ಗಮನ ಸೆಳೆದ ಶಾಸಕಿ: ಇಡೀ ದೇಶಕ್ಕೆ ದೇಶವೇ ಕೋವಿಡ್ ಹೊಡೆತಕ್ಕೆ ಸಿಕುಕಿ ನಲುಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಜನರ ಜತೆ ನಿಳ್ಉವ ಮೂಲಕ ಸೌಮ್ಯಾ ರೆಡ್ಡಿ ದೇಶದ ಗಮನ ಸೆಳೆದರು‌. ಇಡೀ ಕ್ಷೇತ್ರದ ಜನತೆಗೆ ರೇಷನ್ ಕಿಟ್ ವಿತರಣೆ ಮಾಡುವುದು, ಇದನ್ನೆಲ್ಲ ಸ್ವತಃ ಪ್ಯಾಕ್ ಮಾಡುವುದು, ನಿತ್ಯ ಸಾವಿರಾರು ಬಡವರಿಗೆ ಊಟ ತಯಾರಿಸಿ ಬಡಿಸುವುದು, ಆಕ್ಸಿಜನ್ ಕೊರತೆಯಾದವರಿಗೆ, ಬೆಡ್ ಸಿಗದಿರುವವರಿಗೆ ಸ್ವತಃ ತಾವೇ ಮುಂದೆ ನಿಂತು ಸಹಾಯ ಮಾಡುವ ಮೂಲಕ ಕೋವಿಡ್ ಕಾಲಘಟ್ಟದಲ್ಲಿ ಪಕ್ಷ ಮತ್ತು ರಾಜ್ಯದ ಗಮನ ಸೆಳಸೆಳೆದರು ಜತೆಗೆ ಪರಿಸರ ರಕ್ಷಣೆಗೆ ಸಂಬಂಧಿಸಿದ ಅನೇಕ ಹೋರಾಟಗಳು, ಅಭಿಯಾನಗಳನ್ನು ರೂಪಿಸಿ, ಜನಮೆಚ್ಚುಗೆ ಗಳಿಸಿದ್ದಾರೆ.

2023 ರಲ್ಲಿ ಕೂದಲೆಳೆ ಅಂತರದಲ್ಲಿ ಮರೆಯಾದ ಗೆಲುವು: 2023 ರಲ್ಲಿ ಜಯನಗರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸೌಮ್ಯಾ ರೆಡ್ಡಿ ಮೊದಲಿಗೆ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ವಿರುದ್ಧ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಯಿತು. ಆದರೆ, ಮತ ಎಣಿಕೆ ಅಧಿಕಾರಿಗಳು ಮಾಡಿದ ಗೊಂದಲದಿಂದ ಕೊನೆಗೆ 16 ಮತಗಳ ಅಂತರದಲ್ಲಿ ಸೌಮ್ಯಾ ರೆಡ್ಡಿ ಸೋಲಬೇಕಾಯಿತು. ಇದರಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿತ್ತು. ಈ ಫಲಿತಾಂಶ ಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಪ್ರಸ್ತುತ ನ್ಯಾಯಾಲಯದ ಮುಂದಿದೆ.

ಸಂಘಟನಾ ಚತುರತೆಗೆ ಸಿಕ್ಕ ಅವಕಾಶ: ಶಾಸಕರಾಗಿ ಮಾಡಿದ ಸೇವೆ ಮತ್ತು ಬಿಜೆಪಿ ಆಡಳಿತದ ವಿರುದ್ಧ ನಡೆಸಿದ ಮಹಿಳಾ ಪರ ಹೋರಾಟ ಸೌಮ್ಯಾ ರೆಡ್ಡಿ ಅವರಿಗೆ ವಿವಿಧ ಹುದ್ದೆಗಳು ಸಿಗುವಂತೆ ಮಾಡಿತು. ಶಾಸಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಯಾಗಿ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿತ್ತು. ಈ ನಡುವೆ ಅವರ ಸಾಧನೆ ಗುರುತಿಸಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಮ ಮಹಿಳಾ ಘಟಕದ ಹೊಣೆಗಾರಿಕೆಯನ್ನು ವಹಿಸಿದೆ. ಇದನ್ನು ಸಮರ್ಥವಾಗಿ ನಿಭಾಯಿಸುವ ಚಾತುರ್ಯವೂ ಸೌಮ್ಯಾ ರೆಡ್ಡಿ ಅವರಿಗಿದೆ ಎನ್ನಬಹುದು.


Share It

You cannot copy content of this page