ಗುಲ್ಬರ್ಗದಲ್ಲಿ SSLC ಪಾಸ್ ಆದವರಿಗೆ ಒಳ್ಳೆಯ ಉದ್ಯೋಗಾವಕಾಶ. ಗುಲ್ಬರ್ಗದ ಜೆಸ್ಕಾಂ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಖಾಲಿ ಇರುವ 199 ಜೂನಿಯರ್ ಪವರ ಮ್ಯಾನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಹತೆಗಳು ಮತ್ತು ಇತರ ಮಾಹಿತಿಯನ್ನು ನೋಡೋಣ ಬನ್ನಿ.
ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ; ಇದೇ ಅಕ್ಟೋಬರ್ 21 ರಿಂದ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 20 .
ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ವೇತನ ಪಟ್ಟಿ:
ಮೊದಲ ವರ್ಷ -17,000
ಎರಡನೇ ವರ್ಷ – 19,000
ಮೂರನೆಯ ವರ್ಷ – 21,000
3 ವರ್ಷದ ಬಳಿಕ – 28,550-63,000
ಎರಡು ವರ್ಷ ಪರೀಕ್ಷಾರ್ಥವಾಗಿ ಕಾರ್ಯ ನಿರ್ವಹಿಸಬೇಕು.
ಅರ್ಹತೆಗಳು :
ಕನಿಷ್ಠ 18 ವರ್ಷ ತುಂಬಿರಬೇಕು.
ಸಾಮಾನ್ಯ ಅಭ್ಯರ್ಥಿಗಳು 35 ವರ್ಷದ ಒಳಗಿರಬೇಕು.
ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ಮಿತಿ.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಕ್ಕೆ ಗರಿಷ್ಠ 40 ವರ್ಷ.
ಕನ್ನಡ ಭಾಷೆ , ಉತ್ತಮ ಕಣ್ಣಿನ ದೃಷ್ಟಿ, ಹಾಗೂ ದೇಹದೃಢತೆಯನ್ನು ಹೊಂದಿರತಕ್ಕದ್ದು.
ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
https://gescmysore.karnataka.gov.in
ಅರ್ಜಿಯ ಶುಲ್ಕ :
ಸಾಮಾನ್ಯ ಹಾಗೂ ಹಿಂದುಳಿದ ಅಭ್ಯರ್ಥಿಗಳಿಗೆ 614 ರೂ.
SC ST ಹಾಗೂ ಪ್ರವರ್ಗ 1 ಕ್ಕೆ 378 ರೂ.
ವಿಶೇಷ ಚೇತನರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು.
ಆಯ್ಕೆ ಪ್ರಕ್ರಿಯೆ:
ವಿದ್ಯುತ್ ಕಂಬವನ್ನು ಹತ್ತುವುದು ಕಡ್ಡಾಯ. 8 ಮೀಟರ್.
100 ಮೀ ಓಟ.- 14 ಸೆಕೆಂಡ್ ನಲ್ಲಿ
ಸ್ಕಿಪಿಂಗ್ – 1 ನಿಮಿಷಕ್ಕೆ 50 ಬಾರಿ.
ಶಾಟ್ ಪುಟ್ – 12 ಪೌಂಡ್, 3 ಅವಕಾಶ 8 ಮೀಟರ್ ಎಸೆತ .
800 ಮೀ ಓಟ – 3 ನಿಮಿಷ ಸಮಯ.