ರಾಜ್ಯದಲ್ಲಿ ವಾರಪೂರ್ತಿ ಭರ್ಜರಿ ಮಳೆ: ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತೆ ಗೊತ್ತಾ?

Share It

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ‌ ಒಂದುವಾರ ಮಳೆಯಾಗಲಿದೆ ಎಂದು‌ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಉತ್ತಮ ಮಳೆಯಾಗಲಿದೆ.

ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ.

ಭಾಲ್ಕಿ, ಕಮ್ಮರಡಿ, ಗೇರುಸೊಪ್ಪ, ಬಾಳೆಹೊನ್ನೂರು, ಗೌರಿಬಿದನೂರು, ಬೀದರ್, ಶೃಂಗೇರಿ, ಹೊನ್ನಾಳಿ, ಧರ್ಮಸ್ಥಳ, ಹುಮನಾಬಾದ್, ಹೊಸಕೋಟೆ, ಜಯಪುರ, ಎನ್​ಆರ್​ಪುರ, ಚನ್ನಗಿರಿ, ತ್ಯಾಗರ್ತಿ, ಸಿದ್ದಾಪುರ, ಕಾರ್ಕಳ, ಕಲಘಟಗಿ, ಅಥಣಿ, ನರಗುಂದ, ಕಮಲಾಪುರ, ಖಜೂರಿ, ಕೊಪ್ಪ, ಕಳಸ, ಮೂಡಿಗೆರೆ, ಭದ್ರಾವತಿ, ಕುಶಾಲನಗರ, ತರೀಕೆರೆಯಲ್ಲಿ ಮಳೆಯಾಗಿದೆ.

ಚಾಮರಾಜನಗರದಲ್ಲಿ ಅತ್ಯಂತ ಗರಿಷ್ಠ 34.5 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ, ಶಿರಾಲಿಯಲ್ಲಿ 18.6 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.


Share It

You May Have Missed

You cannot copy content of this page