ಬೆಂಗಳೂರು: ಈ ವಾರದ ಬಿಗ್ ಬಾಸ್ ಕ್ಯಾಪ್ಟನ್ ಟಾಸ್ಕ್ ನಲ್ಲಿ ಮೋಸ ನಡೆದಿದೆ. ಆದರೆ, ಭವ್ಯಾ ಗೌಡ ಅವರ ಕ್ಯಾಪ್ಟನ್ ಸ್ಥಾನಕ್ಕೆ ಮಾತ್ರ ಯಾವುದೇ ಚ್ಯುತಿ ಬಂದಿಲ್ಲ.
ಕಳೆದ ಸೀಸನ್ ನಲ್ಲಿ ನಡೆದ ಕ್ಯಾಪ್ಟನ್ ಟಾಸ್ಕ್ ನಲ್ಲಿ ವರ್ತೂರ್ ಸಂತೋಷ್ ಗೆದ್ದಿದ್ದರು. ವೀಕೆಂಡ್ ನಲ್ಲಿ ಬಂದ ಸುದೀಪ್, ಆಟದಲ್ಲಾದ ಮೋಸವನ್ನು ಕಂಡು ಹಿಡಿದರು. ಮೋಸ ಮಾಡಿ ಟಾಸ್ಕ್ ಗೆಲ್ಲೋದಾದ್ರೆ ಇನ್ಮುಂದೆ ಮನೆಗೆ ಕ್ಯಾಪ್ಟನ್ ಬೇಡವೇ ಬೇಡ ಎಂದು ತಾಕೀತು ಮಾಡಿದ್ದರು.
ಕೆಲ ದಿನಗಳ ಕಾಲ ಕ್ಯಾಪ್ಟನ್ ಕೋಣೆಗೆ ಬೀಗವನ್ನೇ ಹಾಕಲಾಗಿತ್ತು. ಆಗ ಕ್ಯಾಪ್ಟನ್ ಆಗಿದ್ದ ವರ್ತೂರು ಸಂತೋಷ್ ಅವರದ್ದು, ಆಟದಲ್ಲಿ ನೇರವಾಗಿ ಮೋಸ ಇರಲಿಲ್ಲ. ಟಾಸ್ಕ್ ಮಾಡುವಾಗ ಸಹಾಯಕರಾಗಿದ್ದ ವಿನಯ್ ಗೌಡ, ವರ್ತೂರ್ ಗೆ ಸಿಗ್ನಲ್ ಕೊಟ್ಟಿದ್ದರು.
ಆದರೆ, ಮೋಸದಿಂದ ಗೆದ್ದ ಕಾರಣಕ್ಕೆ ಮನೆಗೆ ಕ್ಯಾಪ್ಟನ್ ಬೇಡ ಎಂಬ ತೀರ್ಮಾನ ಮಾಡಲಾಗಿತ್ತು. ಆದರೆ, ಈ ಸಲ ಕ್ಯಾಪ್ಟನ್ ಆಗಿ ಆಯ್ಕೆಯಾದ ಭವ್ಯಾ ಗೌಡ ನೇರವಾಗಿ ಮೋಸದಾಟದ ಭಾಗವಾಗಿದ್ದಾರೆ. ಆದರೆ, ಈ ವಿಷಯದಲ್ಲಿ ಸುದೀಪ್ ಹಿಂದಿನ ಸೀಸನ್ ನಂತೆ ಗಟ್ಟಿ ನಿಲುವು ತೆಗೆದುಕೊಂಡಿಲ್ಲ. ಇದಕ್ಕೆ ಕಾರಣ ಏನು ಅನ್ನೋದು ಮಾತ್ರ ವೀಕ್ಷಕರಿಗೆ ಅರ್ಥವಾಗಿಲ್ಲ.
ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಭವ್ಯಾ ಗೌಡ ಬೇರೆ ಕಡೆಯಿಂದ ಬಿದ್ದ ಬಾಲ್ ಪಡೆದು, ಬುಟ್ಟಿಯಲ್ಲಿ ಹಾಕುವ ಮೂಲಕ ಮೋಕ್ಷಿತಾ ಅವರನ್ನು ಹೊರಗಿಟ್ಟಿದ್ದರು. ಈ ವೇಳೆ ರಜತ್ ಈ ಬಗ್ಗೆ ಹೇಳಿದರೂ, ಭವ್ಯಾ ಸುಮ್ಮನಿರುವಂತೆ ಸನ್ನೆ ಮಾಡಿದ್ದರು. ರಜತ್ ಕೂಡ ಈ ಬಗ್ಗೆ ಹೇಳದೆ ಸುಮ್ಮನಿದ್ದರು.
ಉಸ್ತುವಾರಿ ಮಾಡುತ್ತಿದ್ದ ಮಂಜು ಮತ್ತು ಚೈತ್ರಾ ಕೂಡ ಸುಮ್ಮನಿದ್ದರು. ಇದೆಲ್ಲ ಕಾರಣವನ್ನಿಟ್ಟುಕೊಂಡು ಎಲ್ಲರನ್ನೂ ತಪ್ಪು ಎಂದು ಸುದೀಪ್ ಜಾಡಿಸಿದ್ದರು. ನಾನ್ ತಪ್ಪು ಮಾಡಿದ್ದು ಸಾಭೀತಾದ್ರೆ ಕ್ಯಾಪ್ಟನ್ ಸ್ಥಾನ ಬಿಡ್ತೀನಿ ಎಂದಿದ್ದ ಭವ್ಯಾ ಈಗ ಮಾತ್ರ ಸೈಲೆಂಟ್ ಆಗಿದ್ದಾರೆ.
ಭವ್ಯಾ ಗೌಡ ತನ್ನ ತಪ್ಪಿನ ಅರಿವಾಗಿ ತಾನೇ ಕ್ಯಾಪ್ಟನ್ ಸ್ಥಾನದಿಂದ ನೈತಿಕವಾಗಿ ಕೆಳಗಿಳಿಯಬೇಕು. ಆದರೆ, ಅಂತಹ ನೈತಿಕತೆ ಆಕೆ ಈವರೆಗೂ ಎಲ್ಲೂ ಪ್ರದರ್ಶಿಸಿಲ್ಲ. ಹೀಗಾಗಿ, ಆಕೆಯಿಂದ ಅದನ್ನು ನಿರೀಕ್ಷಿಸುವುದು ಬಹಳ ಕಷ್ಟ. ಇನ್ನೂ ಸುದೀಪ್ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಸುದೀಪ್ ಕೂಡ ಅಂತಹ ತೀರ್ಮಾನ ತೆಗೆದುಕೊಳ್ಳುವಂತೆ ಕಾಣುತ್ತಿಲ್ಲ.
ಮುಂದೆ ಬರುವವರು ಮೋಸದಾಟದ ಮೂಲಕವೇ ಗೆಲ್ಲಬಹುದು ಎಂಬ ಮಾಡಲ್ ಇಟ್ಟುಕೊಂಡರೆ, ಬಿಗ್ ಬಾಸ್ ಒಂದು ಇತಿಹಾಸ ಬರೆಯಲಿದೆ ಕಾದು ನೋಡಬೇಕು. ನೈತಿಕತೆಗೆ ಜಾಗವಿದೆಯಾ ಇಲ್ಲವಾ ಎಂಬುದನ್ನು ?