ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ಗ್ಯಾರಂಟಿಯಾಯ್ತು ಆಟೋ ದರ ಏರಿಕೆ!

Share It

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹಾಗೂ ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಇದೀಗ ಆಟೋ ಮೀಟರ್ ದರ ಏರಿಕೆ ಮಾಡುವ ಸಾಧ್ಯತೆಗಳಿವೆ. ಆಟೋ ಮೀಟರ್ ದರ ಹೆಚ್ವಳ ಮಾಡಿ 4 ವರ್ಷ ಆಗಿದೆ. ಈಗ ಸಿಎನ್​ಜಿ ಹಾಗೂ ಎಲ್​ಪಿಜಿ ದರ ಹೆಚ್ಚಳವಾಗಿದೆ. ಹಾಗಾಗಿ ಬೆಂಗಳೂರು ಆಟೋ ಮೀಟರ್ ದರ ಹೆಚ್ಚಳಕ್ಕೆ ಚರ್ಚೆಗಳು ನಡೆದಿವೆ. ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ಈ ದರ ಏರಿಕೆ ಮಾಡುವ ಬಗ್ಗೆ ಚರ್ಚಿಸಲು ಮಾರ್ಚ್12 ರಂದು 11 ಗಂಟೆಗೆ ಇನ್ ಫೆಂಟ್ರಿ ರಸ್ತೆಯಲ್ಲಿರುವ.ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಎಷ್ಟು ಏರಿಕೆ ಮಾಡಬೇಕೆಂಬ ಮಾತು ನಡೆಯಲಿದೆ. 1 ಕಿ.ಮೀಗೆ 5 ರೂಪಾಯಿ, 2 ಕಿಮೀಗೆ 10 ರೂಪಾಯಿ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಿವೆ. ಬೆಂಗಳೂರಲ್ಲಿ ಮಿನಿಮಮ್ ಆಟೋ ಮೀಟರ್ ದರ 2 ಕಿಮೀಗೆ 30 ರೂಪಾಯಿ ಇದೆ. ಈ ಮಿನಿಮಮ್ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.

2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು.ಇತ್ತ ಆಟೋ ಸಿಎನ್​ಜಿ ಒಂದು ಕೆಜಿಗೆ 88 ರೂಪಾಯಿ ಆಗಿದೆ. ಇನ್ನು ಎಲ್ಪಿಜಿ ಕೆಜಿ 61 ರೂಪಾಯಿ ಆಗಿದೆ. ಹಾಗಾಗಿ ಮೀಟರ್ ದರ ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದು, ಮಾರ್ಚ್ 12 ರಂದು ನಡೆಯಲಿರುವ ಸಭೆಯಲ್ಲಿ ದರ ಏರಿಕೆ ಬಗ್ಗೆ ಅಂತಿಮ: ತೀರ್ಮಾನವಾಗಲಿದೆ.

ಒಟ್ಟಿನಲ್ಲಿ ಆಟೋ ಚಾಲಕ ಸಂಘಟನೆಗಳೇನೋ ಬಿಎಂಟಿಸಿ ಮೆಟ್ರೋ ಟಿಕೆಟ್ ದರ ಹೆಚ್ಚಳ ಆಗಿದೆ. ಸಿಎನ್​ಜಿ, ಎಲ್ಪಿಜಿ ರೇಟ್ ಹೆಚ್ಚಾಗಿದೆ. ಹಾಗಾಗಿ ಆಟೋ ಮೀಟರ್ ದರವು ಏರಿಕೆ ಮಾಡಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದು, ಮಾರ್ಚ್​ 12ರ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.


Share It

You cannot copy content of this page