ಬಿಸಿಸಿಐ ಸೆಪ್ಟೆಂಬರ್ 5ರಿಂದ ನಡೆಯುವ ದುಲೀಪ್ ಟ್ರೋಫಿ ಬುಧವಾರ 4 ತಂಡಗಳನ್ನು ಪ್ರಕಟಿಸಿದೆ. ಗಿಲ್ಗೆ ಎ,ಅಭಿಮನ್ಯು ಈಶ್ವರನ್ ಬಿ ಮತ್ತು ಋತುರಾಜ್ ಗಾಯಕ್ವಾಡ್ ಸಿ ಹಾಗೂ ಶ್ರೇಯಸ್ ಅಯ್ಯರ್ಗೆ ಡಿ ತಂಡಗಳ ನಾಯಕರಾಗಿ ನೇಮಕಗೊಂಡಿದ್ದಾರೆ.
ದುಲೀಪ್ ಟ್ರೋಫಿಯಲ್ಲಿ 6 ಜನ ಕನ್ನಡಿಗರಿಗೆ ಅವಕಾಶಸಿಕ್ಕಿದ್ದು ಅದರಲ್ಲಿಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧಕೃಷ್ಣ, ವಿದ್ವತ್ ಕಾವೇರಪ್ಪ ಎ ತಂಡದಲ್ಲಿದ್ದರೆ, ವೈಶಾಕ್ ವಿಜಯ್ ಕುಮಾರ್ ಸಿ ತಂಡದಲ್ಲಿದ್ದಾರೆ. ದೇವದತ್ ಪಡಿಕ್ಕಲ್ ಡಿ ತಂಡದಲ್ಲಿದ್ದಾರೆ.
ದುಲೀಪ್ ಟ್ರೋಫಿಯನ್ನು ಬಾಂಗ್ಲಾದೇಶದ ಟೆಸ್ಟ್ ನ ಪೂರ್ವ ಸಿದ್ಧತೆ ಮತ್ತು ಇಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ತಂಡಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕೊಹ್ಲಿ, ರೋಹಿತ್, ಬೂಮ್ರಾಗೆ ದಿಲೀಪ್ ಟ್ರೋಫಿಯಿಂದ ವಿಶ್ರಾಂತಿ. ಕೊಹ್ಲಿ ಮತ್ತು ರೋಹಿತ್ ಗೆ ಬಿಸಿಸಿಐ ದುಲೀಪ್ ಟ್ರೋಫಿಯಲ್ಲಿ ಆಡುವುದು ಅವರ ಇಚ್ಛೆಗೆ ಬಿಟ್ಟಿತ್ತು ಆದರೆ ಅವರು ಆಡುವುದಿಲ್ಲ ವಿಶ್ರಾಂತಿ ಪಡೆದಿದ್ದಾರೆ. ವೇಗಿ ಬೂಮ್ರಾ ಅವರ ಕಾರ್ಯ ಒತ್ತಡ ಕಡಿಮೆ ಮಾಡುವ ಬಿಸಿಸಿಐ ರೆಸ್ಟ್ ನೀಡಿತ್ತು.