ಪೂನಾ: ಹೆಂಡತಿ ಹೆಣವನ್ನು ಚೀಲಕ್ಕೆ ತುಂಬಿ ಬೈಕ್ ನಲ್ಲಿರಿಸಿಕೊಂಡು ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.
ನಂದೇಡ್ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 1.30 ರ ಸುಮಾರಿಗೆ ವ್ಯಕ್ತಿಯೊಬ್ಬ ಶವವನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ಆಧಾರದಲ್ಲಿ ಪ್ಯಾಟ್ರೋಲ್ ಸಿಬ್ಬಂದಿ ತಪಾಸಣೆ ಮಾಡಿದಾಗ ಮಹಿಳೆ ಶವ ಪತ್ತೆಯಾಗಿದೆ.
ಘಟನೆಯಲ್ಲಿ 28 ವರ್ಷದ ಆರೋಪಿ ನಿಶಾರ್ ತನ್ನ 25 ವರ್ಷದ ಹೆಂಡತಿ ಬಬಿತಾಳನ್ನು ಕೊಲೆ ಮಾಡಿ ತನ್ನ ಬೈಕ್ ನಲ್ಲಿ ಶವ ಇಟ್ಟುಕೊಂಡು ಸಾಗಿಸುತ್ತಿದ್ದ, ಈ ಕುರಿತು ಮಾಹಿತಿ ಸಿಕ್ಕಿದ್ದು ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.