ಇಸ್ರೇಲ್ ನ ಭಾರತೀಯ ಪ್ರಜೆಗಳಿಗೆ ಸುರಕ್ಷತಾ ಸ್ಥಳದಲ್ಲಿರಲು ಸೂಚನೆ
ಇಸ್ರೇಲ್; ಹಿಜ್ಬುಲ್ಲಾ ಮತ್ತು ಹಮಾಸ್ ಉಗ್ರರ ನಡುವಿನ ಇಸ್ರೇಲಿನ ಲ್ಲಿ ಯುದ್ಧ ಸ್ಥಿತಿ ನಿರ್ಮಾಣ ಮಾಡಿದ್ದು, ಭಾರತೀಯರು ಸುರಕ್ಷಿತವಾಗಿರಲು ಸೂಚಿಸಲಾಗಿದೆ.
ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತದ ಪ್ರಜೆಗಳಿಗೆ ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡದಂತೆ ಸೂಚಿಸಿದ್ದು, ಸುರಕ್ಷಿತಾ ಸ್ಥಳದಲ್ಲೇ ಆಶ್ರಯ ಪಡೆಯುವಂತೆ ಸೂಚಿಸಲಾಗಿದೆ.
ಇಸ್ರೇಲ್ ನಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಬೇಕಾದರೂ ದಾಳಿ ನಡೆಯಬಹುದು ಎಂದು ಅಂದಾಹಿಸಲಾಗಿದೆ. ಈ ನಡುವೆ ಅಮೇರಿಕಾ ಸೇರಿದಂತೆ ಅನೇಕ ಬಲಿಷ್ಠ ದೇಶಗಳು ಇಸ್ರೇಲ್ ಗೆ ಬೆಂಬಲ ಸೂಚಿಸಿವೆ.
ಭಾರತದ ಲಕ್ಷಾಂತರ ಜನ ಇಸ್ರೇಲ್ ನಲ್ಲಿ ವಾಸಿಸುತ್ತಿದ್ದು, ಅವರ ಸುರಕ್ಷತೆ ನಮ್ಮ ಜವಾಬ್ದಾರಿ ಆಗಿದ್ದು, ಅವರ ರಕ್ಷಣೆಗೆ ಸಲಹೆ ನೀಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಭಾರತಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ.


