ಬೆಂಗಳೂರು: ರಾಜ್ಯ ರಾಜಧಾನಿಯ ಜನ ಇನ್ನು ಮುಂದೆ ಇ-ಖಾತಾ ಪಡೆಯಲು ಕಚೇರಿಗಳಿಗೆ ಅಲೆಯುವಂತಿಲ್ಲ. ಕುಳಿತ ಜಾಗದಲ್ಲಿ ಆನ್ ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬಿಬಿಎಂಪಿ ರೂಪಿಸಿದೆ.
ಬಿಬಿಎಂಪಿ ವಹಿಯಲ್ಲಿ ದಾಖಲಾದ ಎ’ ಮತ್ತು ‘ಬಿ’ ಖಾತಾಗಳನ್ನು http:// bbmpeaasthi.karnataka.gov.in ವೆಬ್‌ಸೈಟ್‌ನಲ್ಲಿ 21 ಲಕ್ಷಕ್ಕೂ ಅಧಿಕ ಬಿಬಿಎಂಪಿ ವಹಿಯಲ್ಲಿ ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇ-ಖಾತಾ ಪಡೆಯಲು ಕೆಲ ದಾಖಲೆಗಳು ಬೇಕಿವೆ. ಇ-ಆಸ್ತಿ ತಂತ್ರಾಂಶದಲ್ಲು ಕಾವೇರಿಯಿಂದ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ, 2024ರ ಏ.1ರಿಂದ ಈವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ, ಹಾಗೂ ಋಣಭಾರ ಪ್ರಮಾಣ ಪತ್ರ ಸಂಖ್ಯೆ, ಆಸ್ತಿ ತೆರಿಗೆಯ ತಂತ್ರಜ್ಞಾನ 10 ಅಂಕಿ ಅರ್ಜಿ ಸಂಖ್ಯೆ, ಮಾಲೀಕರ ಆಧಾರ್ ಗುರುತಿನ ಚೀಟಿ, ಬೆಸ್ಕಾಂನ 10 ಅಂಕಿಯ బిబిఎంటి ಖಾತಾ ಸಂಖ್ಯೆ, ಆಸ್ತಿ ಭಾವಚಿತ್ರ ದಾಖಲೆ ಅಪ್ ಲೋಡ್ ಮಾಡಬೇಕು.
ಮೇಲಿನ ಎಲ್ಲ ವಿವರವನ್ನು ನಮೂದಿಸಿದ ನಂತರ ತಂತ್ರಾಂಶವು ಎಲ್ಲ ದಾಖಲೆ ಪರಿಶೀಲಿಸಿ ಸ್ವಯಂಚಾಲಿತವಾಗಿ ಇ ಖಾತಾ ನೀಡಲಿದೆ. ಇದು ಅತ್ಯಂತ ಪಾರದರ್ಶಕ ಮತ್ತು ನಾಗರಿಕ ನಿಯಂತ್ರಣದಲ್ಲಿರುವ ವ್ಯವಸ್ಥೆ ಇದಾಗಿದೆ.
ನಮೂದಿಸಿದ ಮಾಹಿತಿ ಅಪೂರ್ಣವಾಗಿದ್ದರೆ, ದಾಖಲೆ ಹೊಂದಿಕೆ ಅಗದಿದ್ದರೆ ಅಥವಾ ಅಂತಿಮ ಇ-ಖಾತಾ ನೀಡದಿರಲು ಆಕ್ಷೇಪಣೆ ಸಲ್ಲಿಸಿದ್ದರೆ ಮಾತ್ರ ನಾಗರಿಕರು ಬಿಬಿಎಂಪಿಗೆ ಭೇಟಿ ನೀಡಬಹುದು.