ಅಪರಾಧ ಸುದ್ದಿ

ಪಾಕಿಸ್ತಾನದ ವಶದಲ್ಲಿದ್ದ 7 ಮೀನುಗಾರರ ರಕ್ಷಣೆ ಮಾಡಿದ ಭಾರತೀಯ ಸೇನೆ

Share It


ಹೊಸದಿಲ್ಲಿ: ಪಾಕಿಸ್ತಾನ ಮತ್ತು ಭಾರತದ ಸಮುದ್ರ ಗಡಿ ದಾಟಿದ್ದಾರೆ ಎಂಬ ಕಾರಣಕ್ಕೆ ಪಾಕಿಸ್ತಾನ ರಕ್ಷಣಾ ಪಡೆಗಳಿಂದ ಬಂಧಿತರಾಗಿದ್ದ ಏಳು ಮೀನುಗಾರರನ್ನು ರಕ್ಷಣೆ ಮಾಡುವಲ್ಲಿ ಭಾರತೀಯ ಕೋಸ್ಟಲ್ ಗಾರ್ಡ್ ಯಶಸ್ವಿ ಯಾಗಿದೆ.

ಎರಡು ಗಂಟೆಗಳ ಸತತ ರೋಚಕ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಜಲಸೇನೆಗೆ ಸೇರಿದ ನಸ್ರುತ್ ಹಡಗನ್ನು ಹಿಮ್ಮೆಟ್ಟಿಸಿದ ಐಇಜಿ (Indian coastal Guard) ಭಾರತದ ಏಳು ಜನ ಮೀನುಗಾರರನ್ನು ರಕ್ಷಣೆ ಮಾಡಿದೆ.

ಓಖಾ ಬಂದರಿನಿಂದ ಮೀನುಗಾರಿಕೆ ಯಲ್ಲಿ ತೊಡಗಿದ್ದ ಕಾಲ ಭೈರವ ಹೆಸರಿನ ದೋಣಿಯಲ್ಲಿ ಮೀನುಗಾರಿಗೆ ತೆರಳಿದ್ದ ಏಳು ಜನ ಮೀನುಗಾರರ ತಂಡದ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ಕೋಸ್ಟಲ್ ಗಾರ್ಡ್ ಹಡಗು, ದೋಣಿಯನ್ನು ನಾಶಗೊಳಿಸಿ, ಅದರಲ್ಲಿದ್ದ ಮೀನುಗಾರರನ್ನು ವಶಕ್ಕೆ ಪಡೆದುಕೊಂಡಿತ್ತು.

ಇದು ಭಾರತೀಯ ಕೋಸ್ಟಲ್ ಗಾರ್ಡ್ ಗಮನಕ್ಕೆ ಬರುತ್ತಿದ್ದಂತೆ ಅವರನ್ನು ರಕ್ಷಣೆ ಮಾಡಲು ಪ್ರಯತ್ನ ನಡೆಯಿತು. ಸತತ ಎರಡು ಗಂಟೆಗಳ ಕಾಲ ಪೈಪೋಟಿ ನಡೆಯಿತು. ಈ ವೇಳೆ ನಸ್ರುತ್ ಹಡಗಿನಲ್ಲಿದ್ದ ಪಾಕಿಸ್ತಾನ ರಕ್ಷಣಾ ಸಿಬ್ಬಂದಿ ಮೇಲೆ ಧೈರ್ಯ ತೋರಿ, ಅವರನ್ನು ಬಂಧಮುಕ್ತಗೊಳಿಸುವಲ್ಲಿ ಯಶಸ್ವಿಯಾಯಿತು.

ಏಳು ಮೀನುಗಾರರನ್ನು ರಕ್ಷಣೆ ಮಾಡಿ, ಓಖಾ ಬಂದರಿಗೆ ಕರೆತರಲಾಗಿದ್ದು, ಮೀನುಗಾರರ ದೋಣಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಕೋಸ್ಟಲ್ ಗಾರ್ಡ್ ಸಾಹಸದ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.


Share It

You cannot copy content of this page