ಬೆಂಗಳೂರು: ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರು ಭಿಕ್ಷೆ ಬೇಡುತ್ತಿರುವ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಂಚಲನ ಮೂಡಿಸಿದೆ.
ಮೆಟ್ರೋ ನಿಲ್ದಾಣದಲ್ಲಿ ಬಿಕ್ಷುಕರಿಗೆ ಅವಕಾಶ ನೀಡದಂತಹ ವ್ಯವಸ್ಥೆ ಸೃಷ್ಟಿಸಿದ್ದರೂ ಸಹ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ, ಬಿಕ್ಷೆ ಬೇಡಿರುವುದು ಇದೀಗ ವ್ಯಾಪಕ ಚರ್ಚೆಗಡ ಗ್ರಾಸವಾಗಿದೆ. ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ನಡೆಸಿರುವ ಅಂಗವಿಕಲ ವ್ಯಕ್ತಿಯ ವಿಡಿಯೋ ಇದೀಗ ವೈರಲ್ ಆಗಿದೆ.
ನೇರಳೆ ಬಣ್ಣದ ಮಾರ್ಗದ ಚಲ್ಲಘಟ್ಟ- ಕೆಂಗೇರಿ ಮಾರ್ಗದಲ್ಲಿ ವ್ಯಕ್ತಿ ಮೆಟ್ರೋ ಹತ್ತಿದ್ದು, ಈತ ಬಿಳಿ ಬಣ್ಣದ ಶರ್ಟ್ ಹಾಗೂ ತಲೆಗೆ ಟೋಪಿ ಹಾಕೊರುವುದು ಕಂಡುಬಂದಿದೆ. ಆತ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಪಡೆದಿದ್ದಾನೆ ಎಂದು ಪತ್ತೆಯಾಗಿದ್ದು, ಕೆಂಗೇರಿ ನಿಲ್ದಾಣದಲ್ಲಿ ರೈಲು ಇಳಿದಿದ್ದಾನೆ ಎನ್ನಲಾಗಿದೆ.
ಈತ ತನ್ನ ಮುರಿದ ಕೈಯ್ಯನ್ನು ಚಾಚಿ ಬಿಕ್ಷೆ ಬೇಡುತ್ತಿರುವ ವಿಡಿಯೋವನ್ನು ಸಾಮಾತಾಣದಲ್ಲಿ ಹಂಚಿಕೊಂಡಿದ್ದು, ಬಾರಿ ವೈರಲ್ ಆಗಿದೆ. ಈ ಹಿಂದೆ ಕೂಡ 2013 ರಲ್ಲಿ ಕೊವಿ ಕೇಳಿಸದ ವ್ಯಕ್ತಿಯೊಬ್ಬರು, ರೈಲಿನಲ್ಲಿ ಬಿಕ್ಷೆ ಬೇಡಿದ್ದರು. ಆಗಿನಿಂದ ಬಹಳ ಕಟ್ಟುನಿಟ್ಟಾದ ತಪಾಸಣೆ ನಡೆಸಲಾಗುತ್ತಿತ್ತು. ಇದೀಗ ಅಂತಹದ್ದೇ ಘಟನೆ ನಡೆದಿದೆ.