ಒಲಿಂಪಿಕ್ಸ್ನಲ್ಲಿ ಮಹಿಳಾ ಕುಸ್ತಿ ವಿಭಾಗದ 50 ಕೆ.ಜಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದರೂ ಕೇವಲ 100 ಗ್ರಾಂ ಹೆಚ್ಚಿನ ದೇಹದ ತೂಕದ ತಪ್ಪಿಗಾಗಿ ಭಾರತದ ಕುಸ್ತಿ ಪಟು ವಿನೇಶ್ ಪೊಗಟ್ ಅವರನ್ನು ಈ ಬಾರಿಯ ಒಲಿಂಪಿಕ್ಸ್ ನಿಂದಲೇ ಅನರ್ಹಗೊಳಿಸಲಾಗಿತ್ತು.
ನಂತರ ವಿನೇಶ್ ಪೊಗಟ್ ಅವರು ತಾನು ಫೈನಲ್ ತಲುಪಿದ ಕಾರಣ ತಮಗೆ ಕನಿಷ್ಠ ಪಕ್ಷ ಬೆಳ್ಳಿ ಪದಕವನ್ನಾದರೂ ನೀಡಿ ಎಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಅಂತ್ಯವಾಗಿದ್ದರೂ ಸಹ 2 ಬಾರಿ ತೀರ್ಪನ್ನು ಮುಂದೂಡಲಾಗಿತ್ತು.
ಇಂದು ಆಗಸ್ಟ್ 13 ರ ಸಂಜೆ ನೀಡಬೇಕಾಗಿದ್ದ ವಿನೇಶ್ ಪೊಗಟ್ ಅವರ ಪ್ರಕರಣದ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಇದೇ ಆಗಸ್ಟ್ 16 ಕ್ಕೆ ಮುಂದೂಡಿದೆ. ಈ ಮೂಲಕ ಸತತ 3ನೇ ಬಾರಿ ವಿನೇಶ್ ಪೊಗಟ್ ಅವರ ಬೆಳ್ಳಿ ಪದಕ ನೀಡಬೇಕೆಂಬ ಬೇಡಿಕೆ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಮುಂದೂಡಿದಂತಾಗಿದೆ.