ರಾಜಕೀಯ ಸುದ್ದಿ

ಪ್ರದೀಪ್ ಈಶ್ವರ್ ಬೆಂಬಲಿಗರಿಂದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ

Share It

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಮತ್ತು ವಿವಾದಗಳಿಗೆ ಎಲ್ಲಿಲ್ಲದ ನಂಟು, ಇದೀಗ ಅವರ ಫೋಟೋ ಬಳಸಿಲ್ಲ ಎಂದು ಬೆಂಬಲಿಗರು ಗಲಾಟೆ ಮಾಡಿ ಮತ್ತೊಂದು ವಿವಾದ ಮೈಮೇಲೆ ತಂದುಕೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುಸಚಿವ ಡಾ. ಎಂ.‌ಸಿ.ಸುಧಾಕರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಶಾಸಕ ಫೋಟೋ ಬಳಸಿಲ್ಲ ಎಂದು ಬೆಂಬಲಿಗರು ಕಿರಿಕ್ ತೆಗೆದರು.

ಇತ್ತೀಚೆಗೆ ಯಾವುದೇ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕುತ್ತಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಕೆಲಸ ಎಂದು ಪ್ರದೀಪ್ ಈಶ್ವರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಪ್ರದೀಪ್ ಈಶ್ವರ್ ಬೆಂಬಲಿಗರ ನಡೆಗೆ ಸಚಿಚ ಸುಧಾಕರ್ ಕೆಲ ಕಾಲ ಮುಜುಗರಕ್ಕೆ ಒಳಗಾದರು. ಅನಂತರ ಪೊಲೀಸರು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಸುಧಾಕರ್, ಮಾತಿಗೂ ಪ್ರದೀಪ್ ಈಶ್ವರ್ ಬೆಂಬಲಿಗರು ಕಿಮ್ಮತ್ತು ಕೊಡಲಿಲ್ಲ.


Share It

You cannot copy content of this page