ಸುದ್ದಿ

PWD ಇಲಾಖೆಯಲ್ಲಿ 42 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳು:ಇಂದೇ ಅರ್ಜಿ ಸಲ್ಲಿಸಿ

Share It

ಕರ್ನಾಟಕ ಲೋಕ ಸೇವಾ ಆಯೋಗವು pwd ಹುದ್ದೆಗಳ ನೇಮಕಾತಿಯ ಕುರಿತು ಆದೇಶವನ್ನು ಹೊರಡಿಸಿದೆ. Pwd ಇಲಾಖೆಯಲ್ಲಿ ಎಇಇ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗೆ ಬೇಕಾದ ಅರ್ಹತೆಗಳು , ಮತ್ತು ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ನೋಡೋಣ ಬನ್ನಿ.

ಲೋಕೋಪಯೋಗಿ ಇಲಾಖೆಯಲ್ಲಿ ಒಟ್ಟು 42 ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಅರ್ಜಿಯನ್ನು ಕರೆದಿದ್ದ ಅದರಲ್ಲಿ ಹೈದೆರಾಬಾದ್ ಕರ್ನಾಟಕ ವೃಂದದ 12 ಎಇಇ ಗಳು ಒಳಗೊಂಡಿವೆ.

ವೇತನ : Rs.83,700- 1,55,200

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 04 -11- 2024

ಅರ್ಜಿಯನ್ನು ಸಲ್ಲಿಸಲು ವಿಧಾನ

ಮೊದಲು ಕೆಪಿಎಸ್‌ಸಿಯ ವೆಬ್‌ಸೈಟ್‌ನಲ್ಲಿ ‘http://www.kpsc.kar.nic.in/’ ಗೆ ಭೇಟಿ ನೀಡಿ.

ಮುಖಪುಟದಲ್ಲಿ ‘Apply Online for Various Notifications’ ಅನ್ನು ಕ್ಲಿಕ್ ಮಾಡಿ. ಬೇರೊಂದು ಪುಟ ಓಪನ್ ಆಗುತ್ತದೆ.

ಓಪನ್ ಆದ ಪುಟದಲ್ಲಿ ಯಾವ್ಯಾವ ಹುದ್ದೆಗೆ ಅರ್ಜಿ ಲಿಂಕ್ ಬಿಡುಗಡೆ ಆಗಿದೆ ಎಂದು ಗಮನಿಸಿಕೊಳ್ಳಬಹುದು.

ಕೆಪಿಎಸ್‌ಸಿ ಪೋರ್ಟಲ್‌ನಲ್ಲಿ ಒನ್‌ ಟೈಮ್‌ ರಿಜಿಸ್ಟ್ರೇಷನ್‌ಗಾಗಿ ‘New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.

ರಿಜಿಸ್ಟ್ರೇಷನ್‌ ವೆಬ್‌ ಸೈಟ್‌ ವಿಳಾಸ – https://kpsconline.karnataka.gov.in/HomePage/Index.html

ಅಗತ್ಯ ಮಾಹಿತಿಯನ್ನು ನೀಡಿ ರಿಜಿಸ್ಟ್ರೇಷನ್‌ ಪೂರ್ಣಗೊಳಿಸಿ. ನಿಮ್ಮ ಪ್ರೊಫೈಲ್‌ ಕ್ರಿಯೇಟ್‌ ಆಗುತ್ತದೆ.

ಒಂದು ವೇಳೆ ಈಗಾಗಲೇ ಕೆಪಿಎಸ್‌ಸಿ ವೆಬ್‌ನಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ದಲ್ಲಿ, ‘Login’ ಎಂದಿರುವಲ್ಲಿ ಕ್ಲಿಕ್ ಮಾಡಿ.

ನಿಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ ಹಾಕಿ ಲಾಗಿನ್ ಆಗಿ.

ಬಳಿಕ ಎಇಇ ಹುದ್ದೆ ಅರ್ಜಿಗೆ ಕೇಳಲಾಗಿರುವ ವಿವರಗಳನ್ನು ನೀಡಿ ಅಪ್ಲಿಕೇಶನ್‌ ಸಲ್ಲಿಸಬಹುದು.

ಅಗತ್ಯ ದಾಖಲೆಗಳು:

ಹೆಸರು ಮತ್ತು ವೈಯಕ್ತಿಕ ವಿವರ
ಮೊಬೈಲ್ ನಂಬರ್
ಸಹಿಯ ಸ್ಕ್ಯಾನ್ ಪ್ರಿಂಟ್
ಶೈಕ್ಷಣಿಕ ವಿವರ ಹಾಗೂ ಅಂಕ ಪಟ್ಟಿಗಳು
ಭಾವಚಿತ್ರ / ಫೋಟೋ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಸರ್ಕಾರಿ ಉದ್ಯೋಗ ಇದ್ದಲ್ಲಿ ಎನ್‌ಒಸಿ

ಅರ್ಜಿಯ ಶುಲ್ಕ

ಸಾಮಾನ್ಯ ಅಭ್ಯರ್ಥಿಗೆ 600 ರೂ
ಹಿಂದುಳಿದ ವರ್ಗದವರಿಗೆ 300 ರೂ
SC,ST, ಪ್ರವರ್ಗ 1 , ಮಾಜಿ ಸೈನಿಕರು, ವಿಕಲ ಚೇತನ ಅಭ್ಯರ್ಥಿಗೆ ಯಾವುದೇ ಶುಲ್ಕ ಇರುವುದಿಲ್ಲ.


Share It

You cannot copy content of this page