ಅಪರಾಧ ರಾಜಕೀಯ ಸುದ್ದಿ

PSI ಫಲಿತಾಂಶ ಪ್ರಕಟ ಮಾಡುವಂತೆ ಸಿಎಂ, ಗೃಹಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಅಭ್ಯರ್ಥಿಗಳು

Share It


ಬೆಂಗಳೂರು: 545 ಹುದ್ದೆಗಳಿಗೆ ನೆಡೆದಿರುವ PSI ನೇಮಕ ಪರೀಕ್ಷೆಯ ಫಲಿತಾಂಶ ಪ್ರಕಟ ಮಾಡುವಂತೆ ಅಭ್ಯರ್ಥಿಯೊಬ್ಬರು ರಕ್ತದಲ್ಲಿ ಪತ್ರ ಬರೆದು ಸರಕಾರವನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಡಾ.ಜಿ. ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಕ್ತದಲ್ಲಿ ಪತ್ರ ಬರೆದಿರುವ ಅಭ್ಯರ್ಥಿಗಳು, ಶೀಘ್ರದಲ್ಲೇ 545 PSI ಹುದ್ದೆಗಳ ಫಲಿತಾಂಶ ಪ್ರಕಟ ಮಾಡಿ ಎಂದು ಕೋರಿದ್ದಾರೆ.

PSI ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಮತ್ತು ಕನ್ನಡ ಭಾಷಾ ವಿಷಯದಲ್ಲಿನ ನ್ಯೂನತೆ ಸೇರಿದಂತೆ ಇನ್ನಿತರ ಕಾರಣಗಳಿಗೆ PSI ಅಭ್ಯರ್ಥಿಗಳ ಫಲಿತಾಂಶ ವಿಳಂಭವಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಢೋಲಾಯಮಾನವಾಗಿದೆ ಎಂಬುದು ಅಭ್ಯರ್ಥಿಗಳ ಅಳಲಾಗಿದೆ.

ಈ ಹಿನ್ನೆಲೆಯಲ್ಲಿ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಸರಕಾರದ ಗಮನಸೆಳೆಯುವ ಪ್ರಯತ್ನ ನಡೆಸಲಾಗಿದೆ. ಕಾಂತಕುಮಾರ್ ಆರ್. ಎಂಬುವವರು ಅಭ್ಯರ್ಥಿಗಳ ಪರವಾಗಿ ಈ ಪತ್ರ ಬರೆದಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಪತ್ರದ ಪ್ರತಿಗಳನ್ನು ಪೋಸ್ಟ್ ಮಾಡಿದ್ದಾರೆ.

ವಿಚಾರಣೆ ಕಾರಣದಿಂದ PSI ನೇಮಕ ಫಲಿತಾಂಶ ಪ್ರಕಟ ಮಾಡಲು ಸರಕಾರ ತಡ ಮಾಡುತ್ತಿದ್ದು, ಇದರಿಂದ ಅಭ್ಯರ್ಥಿಗಳ ಬದುಕು ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಸರಕಾರ ಮುಂದೆ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.


Share It

You cannot copy content of this page