ನಿಂಬೆನಾಡು ಇಂಡಿಯಲ್ಲಿ ಜಿಲ್ಲಾ ಮಟ್ಟದ ಕಟಬರ ಜನ ಜಾಗೃತಿ ಸಮಾವೇಶ.
ವಿಜಯಪುರ: ಕರ್ನಾಟಕ ರಾಜ್ಯದ ಕಟಬು ಕಟಬರ ಅಲೆ ಮಾರಿ ಜನಾಂಗದ ಜನಜಾಗೃತಿ ಸಮಾವೇಶವನ್ನು ಸಪ್ಟೆಂಬರ್ 1ರ ಭಾನುವಾರ ಇಂಡಿ ಪಟ್ಟಣದಲ್ಲಿ ಶಂಕರ ಪಾರ್ವತಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕ ಕಟಬರ ಸಮಾಜ ಇಂಡಿ ಉಪಾಧ್ಯಕ್ಷರು ಜಯಪ್ಪ ಕ್ಷತ್ರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಮಾಜದ ಸಂಘಟನೆ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘಟಿತರಾಗದ ಕಾರಣಕ್ಕೆ ನಮ್ಮ ಜನರಿಗೆ ಸರ್ಕಾರದ ಯಾವುದೇ ಸೌಲತ್ತುಗಳು ನೀಡಿಲ್ಲ, ಇದರಿಂದ ನಾವು ಅತ್ಯಂತ ಹಿಂದುಳಿದ ಜನಾಂಗವಾಗಿಯೇ ಉಳಿದಿದ್ದೆವೆ ಎಂದರು.
ಈ ಕಾರ್ಯಕ್ರಮದಲ್ಲಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇ.80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ಮಾಜಿ ಸೈನಿಕರಿಗೆ ಮತ್ತು ಸೈನ್ಯದಲ್ಲಿ ಮೃತರಾದ ವೀರಯೋಧರ ಪತ್ನಿಯರಿಗೆ ಸನ್ಮಾನ, ಸರ್ಕಾರ ಕೆಲಸದಿಂದ ನಿವೃತ್ತಿ ಹೊಂದಿದವರನ್ನು ಸನ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಟಬು ಕಟಬರ ರಾಜ್ಯ ಅಧ್ಯಕ್ಷ ಜಗದೀಶ ಕ್ಷತ್ರಿ, ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾಟಕರ, ತಾಲೂಕ್ ಅಧ್ಯಕ್ಷ ಭೀಮಾಶಂಕರ ಕ್ಷತ್ರಿ, ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಮತ್ತು ಮಾಜಿ ಶಾಸಕ ರಮೇಶ ಭೂಸನೂರ, ಸಿಂದಗಿ ಮತ್ತು ಅಲಮೇಲ ತಾಲ್ಲೂಕ ಕಟಬು ಕಟಬರ ಅಧ್ಯಕ್ಷ ಸಂತೋಷ ಕ್ಷತ್ರಿ, ಕರಣ ಕ್ಷತ್ರಿ ಪರಪ್ಪನ ಅಗ್ರಹಾರ (ಜೈಲರ್) ಅರುಣಕುಮಾರ ಜಿಲ್ಲಾ ಅಧ್ಯಕ್ಷ ಕಲ್ಬುರ್ಗಿ ಮೊದಲಾದವರು ಭಾಗವಹಿಸಲಿದ್ದಾರೆ.