ಗ್ರಾಮ ರಕ್ಷಣಾ ಸಮಿತಿ ಸದಸ್ಯರನ್ನು ಅಪಹರಿಸಿ ಗಲ್ಲಿಗೇರಿಸಿದ ಭಯೋತ್ಪಾದಕರು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಇಬ್ಬರು ವಿಲೇಜ್ ಡಿಫೆನ್ಸ್ ಗಾರ್ಡ್‌ಗಳನ್ನು (ವಿಡಿಜಿ) ಅಪಹರಿಸಿದ ಭಯೋತ್ಪಾದಕರು ಗಲ್ಲಿಗೇರಿಸಿದ್ದಾರೆ.
ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಹತ್ಯೆಯಾದ ಸಿಬ್ಬಂದಿ. ಇವರು ಸ್ಥಳೀಯ ಸಮುದಾಯಗಳನ್ನು ಭಯೋತ್ಪಾದಕರಿಂದ ರಕ್ಷಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಾಪಿಸಿದ ಗ್ರಾಮ ರಕ್ಷಣಾ ಸಮಿತಿಯ ಸದಸ್ಯರಾಗಿದ್ದರು.
ಇವರಿಬ್ಬರು ಅಧ್ವಾರಿ ಪ್ರದೇಶದ ಮುಂಜ್ಲಾ ಧಾರ್ ಅರಣ್ಯದಲ್ಲಿ ದನ ಮೇಯಿಸಲು ಹೋಗಿದ್ದರು ಆದರೆ ವಾಪಸಾಗಿರಲಿಲ್ಲ, ಹೀಗಾಗಿ ಅವರನ್ನು ಅಪಹರಿಸಿದ್ದರು ಎಂದಹ ಕುಟುಂಬ ಸದಸ್ಯರು ಅಪಹರಣವನ್ನು ದೃಢಪಡಿಸಿದ್ದರು.
ಕುಲದೀಪ್ ಕುಮಾರ್ ಅವರ ಸಹೋದರ ಪೃಥ್ವಿ, ಅವರ ಸಹೋದರ ಮತ್ತು ಅಹ್ಮದ್ ಅವರನ್ನು ಭಯೋತ್ಪಾದಕರು ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ. “ನನ್ನ ಸಹೋದರ ಮತ್ತು ಅಹ್ಮದ್ ಅವರನ್ನು ಭಯೋತ್ಪಾದಕರು ಅಪಹರಿಸಿ ಕೊಂದಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ ಎಂದು ಪೃಥ್ವಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ದಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆಯಿಂದ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪಿನ ಒಂದು ಶಾಖೆಯಾದ ಕಾಶ್ಮೀರ ಟೈಗರ್ಸ್ ಹತ್ಯೆಯ ಹೊಣೆ ಹೊತ್ತುಕೊಂಡಿತ್ತು.
ಅವರು ಸಂತ್ರಸ್ತರ ದೇಹಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಸ್ಥಳೀಯ ಪೊಲೀಸರು ಭಯೋತ್ಪಾದಕರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.


