ಕೊಂಕಣಕ್ಕೆ ಪ್ರಯಾಣಿಸುವ ಗಣಪತಿ ಭಕ್ತರಿಗೆ ಟೋಲ್ ವಿನಾಯಿತಿ ಘೋಷಿಸಿದ ಸರ್ಕಾರ

Share It

ಮುಂಬಯಿ : ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಏಕನಾಥ ಶಿಂದೆ ಅವರ ನೇತೃತ್ವದ ಎನ್ ಡಿ ಎ ಸರಕಾರ ಇದೀಗ ಗಣಪತಿ ಭಕ್ತರಿಗೆ ವಿಶೇಷ ವಿನಾಯಿತಿ ಘೋಷಣೆ ಮಾಡಿದೆ. ಕೊಂಕಣ ಪ್ರದೇಶಕ್ಕೆ ಗಣಪತಿ ವೀಕ್ಷಣೆಗೆ ತೆರಳುವ ಭಕ್ತರಿಗೆ ಟೋಲ್ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

ಈ ಟೋಲ್ ವಿನಾಯಿತಿಯು ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಮತ್ತು PWD ಸಚಿವಾಲಯದ ಅಡಿಯಲ್ಲಿ ಕೊಂಕಣಕ್ಕೆ ಹೋಗುವ ಎಲ್ಲಾ ಇತರ ರಸ್ತೆಗಳಲ್ಲಿ ಮಾನ್ಯವಾಗಿರುತ್ತದೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಆದೇಶದ ಮೇರೆಗೆ ಈ ವಿನಾಯಿತಿ ನೀಡಲಾಗಿದೆ. 5ನೇ ಸೆಪ್ಟೆಂಬರ್‌ನಿಂದ 19ನೇ ಸೆಪ್ಟೆಂಬರ್ 2024ರ ನಡುವೆ ಮೇಲೆ ತಿಳಿಸಿದ ಮಾರ್ಗಗಳಲ್ಲಿ ಹೆಚ್ಚುವರಿ ಟೋಲ್ ವಿನಾಯಿತಿ ಇದೆ ಎಂದು CMO ಬುಧವಾರ ತಿಳಿಸಿದೆ.


Share It

You May Have Missed

You cannot copy content of this page