ಫ್ಯಾಷನ್ ಸುದ್ದಿ

ಗೋಗ್ಯಾಸ್ ಕಂಪನಿಯ ಎಲೆಕ್ಟ್ರಿಕ್ ಗೋ ಬೈಕ್ ಬಿಡುಗಡೆ

Share It

ಸದ್ಯ ಎಲ್ಲೆಲ್ಲೂ ಎಲೆಕ್ಟಿಕ್ ಬೈಕ್ ಕಾರ್ ಗಳದ್ದೇ ಕಾರುಬಾರು. ನೀವು ಇಲೆಕ್ಟಿಕ್ ಬೈಕ್ ಕೊಂಡುಕೊಳ್ಳುವ ಯೋಚನೆಯಲ್ಲಿದ್ದೀರ? ನಿಮಗಾಗಿ ಕಾನ್ಫಿಡೆನ್ಸ್ ಗ್ರೂಪ್ ಗೋಗ್ಯಾಸ್ ಕಂಪನಿಯು ಗೋಬೈಕ್ ಎಂಬ ಹೊಸ ಮಾದರಿಯ, ಉತ್ತಮ ಕಾರ್ಯಕ್ಷಮತೆಯುಳ್ಳ, ಸರಳ ನಿಯಂತ್ರಣದ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

ಕಂಪನಿಯು ಆರಂಭದಲ್ಲಿ 8 ನಾವೀನ್ಯ ಮಾದರಿಗಳನ್ನು ಜನರ ಮುಂದಿಟ್ಟಿದೆ. ನಾಲ್ಕು ಸ್ಕೂಟರ್ಗಳು ಮತ್ತು ನಾಲ್ಕು ಬೈಕ್ ಗಳನ್ನು ಪರಿಚಯಿಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 80 ರಿಂದ 120 ಕಿಮೀ ಪ್ರಯಾಣಿಸಬಹುದಾಗಿದೆ. ಈ ಬೈಕ್ ನ ವಿಶೇಷವೆಂದರೆ ಕೇವಲ 2 ರಿಂದ 4 ಗಂಟೆಯ ಒಳಗೆ ವೇಗವಾಗಿ ಚಾರ್ಜ್ ಮಾಡಬಹುದಾದ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಎಲ್ಲಾ ವಯೋಮಾನದವರು ಸುಲಭವಾಗಿ ಮತ್ತು ಆರಾಮದಾಯಕವಾಗಿ ರೈಡ್ ಮಾಡಬಹುದು. ಜೊತೆಗೆ ಟೆಸ್ಟ್ ಡ್ರೈವ್ ಸಹ ಲಭ್ಯವಿದೆ.

GoBike ಮಾದರಿಗಳು ICAT ನಿಂದ ಪ್ರಮಾಣೀಕೃತವಾಗಿದ್ದು, ಅತ್ಯುನ್ನತ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಖಾತ್ರಿಪಡಿಸುತ್ತದೆ. ಈ ಪ್ರಮಾಣೀಕರಣವು ಗೋಬೈಕ್ ವಾಹನಗಳು ಪರಿಸರ ಸ್ನೇಹಿ ಮಾನದಂಡಗಳನ್ನು ಪೂರೈಸುವುದಲ್ಲದೆ ಗ್ರಾಹಕರಿಗೆ ಪ್ರೀಮಿಯಂ, ಸುಸ್ಥಿರ ಎಲೆಕ್ಟ್ರಿಕ್ ವಾಹನದ ಅನುಭವವನ್ನು ನೀಡುತ್ತದೆ ಎಂದು ಖಾತರಿಯಾಗಿದೆ.

” ನಮ್ಮ ಎಲೆಕ್ಟ್ರಿಕ್ ವಾಹನಗಳು ಪರಿಸರ ಮಾಲಿನ್ಯ ಹಾಗೂ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ನಮ್ಮ ಉದ್ದೇಶ ಸ್ಥಿರವಾದ ಇಂಧನಗಳನ್ನು ಉತ್ತೇಜನ ಮಾಡುವುದಾಗಿದೆ. (LPG)(ಎಲ್ಪಿಜಿ), ಸಿಎನ್ಜಿಯಿಂದ (CNG ) ಇವಿವರೆಗೆ (EV) ಗಳ ಮೂಲಕ ಕಾನ್ಫಿಡೆನ್ಸ್ ಗ್ರೂಪ್ ಸದಾ ಪರಿಸರದ ಜವಾಬ್ದಾರಿಗೆ ಆದ್ಯತೆ ನೀಡುತ್ತಿದೆ. ಭಾರತದಲ್ಲಿ 270 ಕ್ಕೂ ಹೆಚ್ಚು ಆಟೋ ಎಲ್ಪಿಜಿ ಕೇಂದ್ರಗಳು ಮತ್ತು ಬೆಂಗಳೂರಿನಲ್ಲಿ 40 CNG ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ ವಾಹನಗಳಿಂದ ಹೊರಹೊಮ್ಮುವ ಹೊಗೆಯನ್ನು ಕಡಿಮೆ ಮಾಡಲು ಕಾನ್ಫಿಡೆನ್ಸ್ ಗ್ರೂಪ್ ಶ್ರೇಷ್ಠ ಸಂಸ್ಥೆಯಾಗಿದೆ . ಗೋ ಬೈಕ್ ಈ ಪ್ರಯಾಣದಲ್ಲಿ ಒಂದು ಮುಖ್ಯ ಹೆಜ್ಜೆಯಾಗಲಿದೆ. ಇದು ಪರಿಸರ ಸ್ನೇಹಿ, ಹೊಸತನವುಳ್ಳ ಪ್ರಯಾಣವನ್ನು ಕಲ್ಪಿಸಲಿದೆ ” ಎಂದು ಕಾನ್ಫಿಡೆನ್ಸ್ ಗ್ರೂಪ್ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ. ನಿತಿನ್ ಖರಾ ಹೇಳಿದರು.
ಗೋ ಬೈಕ್ ಪ್ರಮುಖ ವೈಶಿಷ್ಟ್ಯಗಳು:

  1. ಬ್ಯಾಟರಿ ಮತ್ತು ಶ್ರೇಣಿಯು: ಗೋಬೈಕ್ ನಲ್ಲಿ ಲಿಥಿಯಮ್-ಅಯಾನ್ ಬ್ಯಾಟರಿ ಇದ್ದು, 80 ರಿಂದ 120 ಕಿಮೀ ದೂರವನ್ನು ಪ್ರಯಾಣ ಮಾಡಬಹುದು. ಇದು ನಾವು ಕೊಂಡುಕೊಳ್ಳುವ ಸೆಗ್ಮ್ಂಟ್ (ಮಾದರಿ) ಮೇಲೆ ಅವಲಂಬಿತವಾಗಿರುತ್ತದೆ.
  2. ಚಾರ್ಜಿಂಗ್ ದಕ್ಷತೆ:

ಬಹಳ ವೇಗವಾಗಿ ಚಾರ್ಚ್ ವ್ಯವಸ್ಥೆ ಇದ್ದು 2 ರಿಂದ 4 ಗಂಟೆಗಳಲ್ಲಿ ವಾಹನ ಸಂಪೂರ್ಣ ಚಾರ್ಜ್ ಆಗುತ್ತದೆ.

  1. ಆಧುನಿಕ ವಿನ್ಯಾಸ:

ಗೋಬೈಕ್ ನೋಡಲು ಮತ್ತು ಆಕರ್ಷಕ ವಿನ್ಯಾಸವು ಆರಾಮದಾಯಕ ಸೀಟ್ ಮತ್ತು ಸ್ಮಾರ್ಟ್ ಡಿಜಿಟಲ್ ಡಿಸ್ಪ್ಲೇ ಅನ್ನು ಹೊಂದಿದೆ.

  1. ಭದ್ರತಾ ವೈಶಿಷ್ಟ್ಯಗಳು: ಗೋಬೈಕ್ ಎಬಿಎಸ್, ಸ್ಮಾರ್ಟ್ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಗಳು ಮತ್ತು ಸಿಎನ್ಆರ್ ಲಾಕಿಂಗ್ ಸಿಸ್ಟಮ್ನಂತಹ ಆಧುನಿಕ ಭದ್ರತಾ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಇದು ಆಪ್ಟಿಮಲ್ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಬೈಕ್ ಕೊಳ್ಳುವ ಸ್ಥಳ
ಗೋಬೈಕ್ ಬೆಂಗಳೂರಿನಲ್ಲಿ ಕೆಳಕಂಡ ಸ್ಥಳಗಳಲ್ಲಿ ಲಭ್ಯವಿರುತ್ತದೆ:

1) ಸೈಟ್ 633, ಸರ್ವೇ ನಂ. 14/1, ಮುನ್ಸಿಪಲ್ ನಂ. 53, ಹಳೆ ಪಿಐಡಿ ನಂ. 41-1-53, ಹೊಸ ಪಿಐಡಿ ನಂ. 158-M0106-21, ಹಳೆ ಸೈಟ್ ನಂ. 53 ಮತ್ತು 55, ದೀವಟಿಗೆರಾಮನಹಳ್ಳಿ, ಬೆಂಗಳೂರು ಸೌತ್ ತಾಲೂಕ್, ಜಿಲ್ಲೆ ಬೆಂಗಳೂರು ಜಿಲ್ಲೆ (ಅರ್ಬನ್), ಪಿನ್: 560026.

2) ಸೈಟ್ 646, ಸೈಟ್ ನಂ. 14, ಹೊಸ ಮುನ್ಸಿಪಲ್ ಖಾತಾ ನಂ. 618/78/1-14, ಹಳೆಯ ಮುನ್ಸಿಪಲ್ ಖಾತಾ ನಂ. 6/14, ನಾಗವಾರ ಗ್ರಾಮ (ವೀರಣ್ಣಪಾಳ್ಯ), ಕಸಬಾ ಹೋಬಳಿ, ಬೆಂಗಳೂರು ನಾರ್ತ್ ತಾಲೂಕು, ಬಿಬಿಎಂಪಿ ವಾರ್ಡ್ ನಂ. 23, ಬೆಂಗಳೂರು 560045.

3) ಪಿಐಡಿ ನಂ. 94-88-92 ಮತ್ತು 94-88-93, ಸೈಟ್ ನಂ. 90, ಕರಿಯಾನ ಪಾಳ್ಯ, ಟೌನ್ ಸೈಂಟ್ ಥಾಮಸ್, ಬೆಂಗಳೂರು ಜಿಲ್ಲೆ- 560002.

4) ಸೈಟ್ 592, ಬಿಬಿಎಂಪಿ ಪಿಐಡಿ ನಂ. 326/38/1, ವರ್ತುರ್ ಗ್ರಾಮ, ವರ್ತುರ್ ಹೋಬಳಿ, ಬೆಂಗಳೂರು ಈಸ್ಟ್ ತಾಲೂಕು, ಜಿಲ್ಲೆ: ಬೆಂಗಳೂರು (ಅರ್ಬನ್), ರಾಜ್ಯ: ಕರ್ನಾಟಕ, ಪಿನ್: 560087.

5) ಸೈಟ್ 562, ಖಾತಾ ನಂ. 18/18/1168/17, 17/17/306/17, 246/17/1377, ಹಳೆಯ ಸರ್ವೇ ನಂ. 17, ಮಲತಹಳ್ಳಿ ಗ್ರಾಮ, ಯಶವಂತಪುರ ಹೋಬಳಿ, ಬೆಂಗಳೂರು ನಾರ್ತ್, ಜಿಲ್ಲೆ: ಬೆಂಗಳೂರು (ಅರ್ಬನ್), ರಾಜ್ಯ: ಕರ್ನಾಟಕ, ಪಿನ್: 560056.

ಟೆಸ್ಟ್ ಡ್ರೈವ್ ಮತ್ತು ಇತರ ವಿವರಗಳಿಗಾಗಿ, +91 89567 13166 ಗೆ ಕರೆ ಮಾಡಿ.


Share It

You cannot copy content of this page