ಇಂಡೊ ಟಿಬೆಟನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಖಾಲಿ ಇರುವ 345 ಮೆಡಿಕಲ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆದಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಮತ್ತು ಕೊನೆಯ ದಿನಾಂಕ ಹಾಗೂ ಹುದ್ದೆಯ ಬಗೆಗೆ ಇತರ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.
ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ , ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇವರನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನೇಮಕ ಮಾಡಲಾಗುತ್ತದೆ. ಇದರ ಜೊತೆ ಜೊತೆಗೆ ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ, ಎಸ್‌ಎಸ್‌ಬಿ ಹಾಗೂ ಅಸ್ಸಾಂ ರೈಫಲ್ಸ್‌ಗಳಲ್ಲಿಯೂ ನಿಯೋಜನೆ ಮಾಡಲಾಗುತ್ತದೆ.
ಹುದ್ದೆಗಳು:
- ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (ಸೆಕೆಂಡ್ ಇನ್ ಕಮಾಂಡ್) : 05
- ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (ಡೆಪ್ಯೂಟಿ ಕಮಾಂಡರ್): 176
- ಮೆಡಿಕಲ್ ಆಫೀಸರ್ (ಅಸಿಸ್ಟಂಟ್ ಕಮಾಂಡಂಟ್) : 164
ವಿದ್ಯಾರ್ಹತೆ :
ಡಿಪ್ಲೊಮ,ಡಿಗ್ರಿ,ಡಿಎಂ,ಎಂ.ಸಿಹೆಚ್ ,ಪಿಜಿ ಅಥವಾ ಎಂಬಿಬಿಎಸ್ ಉತ್ತೀರ್ಣವಾಗಿರಬೇಕು.
ವಯೋಮಿತಿ :
ವಯೋಮಾನದಲಿ ಯಾವುದೇ ಸಡಿಲಿಕೆ ಇರುವುದಿಲ್ಲ.
- ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (ಸೆಕೆಂಡ್ ಇನ್ ಕಮಾಂಡ್) : 30 ವರ್ಷ
- ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (ಡೆಪ್ಯೂಟಿ ಕಮಾಂಡರ್): 40 ವರ್ಷ
- ಮೆಡಿಕಲ್ ಆಫೀಸರ್ (ಅಸಿಸ್ಟಂಟ್ ಕಮಾಂಡಂಟ್) : 50 ವರ್ಷ
ಮುಖ್ಯ ದಿನಾಂಕ:
ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ: 16-10-2024.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-11-2024
ಅರ್ಜಿಯ ಶುಲ್ಕ :
SC ST ಮಾಜಿ ಸೈನಿಕರು ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ.
ಇತರ ವರ್ಗದವರಿಗೆ 400 ರೂ ಗಳು ಅರ್ಜಿಯ ಶುಲ್ಕ ಇರುತ್ತದೆ.
ಆಯ್ಕೆಯ ವಿಧಾನ ಮತ್ತು ವೇತನ :
ಅಭ್ಯರ್ಥಿಗಳನ್ನು ಹಂತ ಹಂತವಾಗಿ ಲಿಖಿತ ಪರೀಕ್ಷೆ ,ಸಹಿಷ್ಣುತಾ ಪರೀಕ್ಷೆ ,ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಮೂಲಕ
ಆಯ್ಕೆ ಮಾಡಲಾಗುತ್ತದೆ. 15,500 ರಿಂದ 61,300 ರ ವರೆಗೆ ನಿಗದಿ ಪಡಿಸಲಾಗಿದೆ.
ಅಗತ್ಯ ದಾಖಲೆಗಳು:
ವೈಯಕ್ತಿಕ ದಾಖಲೆಗಳು
SSLC ಅಂಕಪಟ್ಟಿ
ಜನ್ಮ ದಿನಾಂಕದ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಎಂಬಿಬಿಎಸ್, ಎಂಡಿ ಪದವಿ ಪ್ರಮಾಣ ಪತ್ರ
ಅನುಭವದ ಪತ್ರ ಇದ್ದರೆ ಸಲ್ಲಿಸಬಹುದು.
ಇತರೆ ದಾಖಲೆಗಳು