SSLC ಅಥವಾ ಐಟಿಐ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ ಆಗಿದ್ರೆ ಯಂತ್ರ ಇಂಡಿಯಾ ಲಿಮಿಟೆಡ್ 4039 ಶಿಶಿಕ್ಷು ತರಬೇತುದಾರ ಹುದ್ದೆಗಳಿಗೆ ಅರ್ಜಿಯನ್ನು ಕರೆದಿದೆ. ಅರ್ಜಿಯನ್ನು ಸಲ್ಲಿಸಲು ಇರಬೇಕಾದ ಅರ್ಹತೆಗಳು ಯಾವುವು ಎಂದು ಈ ಕೆಳಗಿನಂತೆ ನೋಡೋಣ ಬನ್ನಿ
1961 ರ ಅಪ್ರೆಂಟಿಸ್ ಕಾಯ್ದೆ ಪ್ರಕಾರ 4039 ಹುದ್ದೆಗಳ ಭರ್ತಿಗೆ ಆದೇಶವನ್ನು ಹೊರಡಿಸಿದೆ. 58ನೇ ಬ್ಯಾಚ್‌ನ ನಾನ್-ಐಟಿಐ ಮತ್ತು ಐಟಿಐ ಕೆಟಗರಿಯ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿಗೆ ಆರ್ಡಿನನ್ಸ್ ಮತ್ತು ಆರ್ಡಿನನ್ಸ್ ಎಕ್ವಿಪ್ಮೆಂಟ್ ಫ್ಯಾಕ್ಟರಿಗಳಲ್ಲಿ ನೇಮಕಾತಿ ಮಾಡಿಕೊಳ್ಳಲು ಯಂತ್ರ ಇಂಡಿಯಾ ಲಿಮಿಟೆಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು ಹುದ್ದೆಗಳಲ್ಲಿ ಐಟಿಐ ಅಲ್ಲದ ಅಭ್ಯರ್ಥಿಗಳಿಗೆ 1463 ಹುದ್ದೆಗಳು ಹಾಗೂ ಎಕ್ಸ್ ಐಟಿಐ ಅಭ್ಯರ್ಥಿಗಳಿಗೆ 2576 ಹುದ್ದೆಗಳಿಗೆ. ಭಾರತೀಯ ಪ್ರಜೆಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹತೆ :
ಐಟಿಐ ಅಲ್ಲದ ಅಭ್ಯರ್ಥಿಗಳು ಒಟ್ಟಾರೆ ಶೇಕಡಾ 60 ಕ್ಕಿಂತ ಹೆಚ್ಚು ಹಾಗೂ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ 40 ಅಂಕದೊಂದಿಗೆ SSLC ತೇರ್ಗಡೆಯಾಗಿರಬೇಕು.
ಐಟಿಐ ಅಭ್ಯರ್ಥಿಗಳು ಟ್ರೇಡ್ ಪರೀಕ್ಷೆಯನ್ನು ಬರೆದು ಅದರಲ್ಲಿ ಪಾಸ್ ಆಗಿರಬೇಕು. ಇದರ ಜೊತೆಗೆ ಎನ್‌ಸಿವಿಟಿ ಇಲ್ಲವೇ ಎಸ್‌ಸಿವಿಟಿ ಪ್ರಮಾಣ ಪತ್ರವನ್ನು ಪಡೆದಿರಬೇಕು. SSLC ಮತ್ತು ಐಟಿಐ ನಿಂದ 50 ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು. ಅಂಕಗಳನ್ನು ಪರಿಗಣಿಸಿ ಶಾಟ್ ಲಿಸ್ಟ್ ಬಿಡುಗಡೆಲಾಗುತ್ತದೆ.
ವಯೋಮಿತಿ ;
ಕನಿಷ್ಠ 14 ವರ್ಷ ಗರಿಷ್ಠ 35 ವರ್ಷ ವಯೋಮಿತಿ ಇರಬೇಕು.
ಈ ಕುರಿತ ನೋಟಿಫಿಕೇಶನ್ ಓದಲು ಇಲ್ಲಿ ಕ್ಲಿಕ್ ಮಾಡಿ
https://www.yantraindia.co.in. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಅಕ್ಟೋಬರ್ ಕೊನೆಯ ವಾರದಲ್ಲಿ ಅವಕಾಶ ನೀಡಲಾಗುತ್ತದೆ.
ಮೊದಲು ಇಲ್ಲಿ ಅರ್ಜಿಯನ್ನು ಸಲ್ಲಿಸಿ https://www.apprenticeship.gov.in ಬಳಿಕ ಯಂತ್ರ ಇಂಡಿಯಾ ಲಿಮಿಟೆಡ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ವೇತನ :
8,000- 10,000
ಅರ್ಜಿಯನ್ನು ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು :
ಆಧಾರ್ ಕಾರ್ಡ್
ಮೊಬೈಲ್ ನಂಬರ್
E mail
ಜನ್ಮ ದಿನಾಂಕದ ಪ್ರಮಾಣ ಪತ್ರ
SSLC ಅಂಕಪಟ್ಟಿ
ಐಟಿಐ ಪಾಸಾದ ಎನ್‌ಸಿವಿಟಿ / ಎಸ್‌ಸಿವಿಟಿ
ಕಾರ್ಯಾನುಭವ ಪ್ರಮಾಣ ಪತ್ರ