ರಾಯಚೂರು: ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಜನ ಅಸ್ವಸ್ಥ

Share It

ಲಿಂಗಸಗೂರು: ಮಧ್ಯಾಹ್ನದ ಮಾಂಸದೂಟ ಸೇವಿಸಿ 20 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಪರಂಪರ ತಾಂಡಾದಲ್ಲಿ ದೇವರ ಕಾರ್ಯದಲ್ಲಿ ಮಾಂಸದಡಿಗೆ ಮಾಡಲಾಗಿತ್ತು. ನೂರಾರು ಜನರು ಕಾರ್ಯದಲ್ಲಿ ಭಾಗವಹಿಸಿ, ಊಟ ಸೇವಿಸಿದ್ದರು. ಈ ವೇಳೆ 20 ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.

ಅಸ್ವಸ್ಥತಗೊಂಡವರಲ್ಲಿ ಹತ್ತು ಜನರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share It

You May Have Missed

You cannot copy content of this page