ಅಪರಾಧ ಸುದ್ದಿ

ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಸಾವು

Share It

ಲಕ್ನೋ: ಮನೆ ಕುಸಿದು ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಆರು ಜನ ಮೃತಪಟ್ಟಿರುವ ಘಟನೆ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಪ್ರದೇಶದ ಆಶಾಪುರಿ ಕಾಲೋನಿಯಲ್ಲಿ ನಡೆದಿದೆ.

ಮೃತರನ್ನು ರಿಯಾಜುದ್ದೀನ್ ಅಲಿಯಾಸ್ ರಾಜು (50), ಅವರ ಪತ್ನಿ ರುಖ್ಸಾನಾ (45), ಸಲ್ಮಾನ್ (16), ತಮನ್ನಾ (24), ಹಿವ್ಜಾ (3) ಮತ್ತು ಆಸ್ ಮೊಹಮ್ಮದ್ (26) ಎಂದು ಗುರುತಿಸಲಾಗಿದೆ. ರಿಯಾಜುದ್ದೀನ್ ಎಂಬ ವ್ಯಕ್ತಿಯ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 19 ಜನರು ವಾಸಿಸುತ್ತಿದ್ದರು ಎಂದು ಬುಲಂದ್‌ಶಹರ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ಎಂಟು ನಿವಾಸಿಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಾಜುದ್ದೀನ್ ಅವರ ಪತ್ನಿಯ ಆಸ್ಪತ್ರೆಗೆ ದಾಖಲಾಗಿ ವಾಪಾಸದ ನಂತರ ಚಿಕಿತ್ಸೆಗಾಗಿ ಆಕ್ಸಿಜನ್ ಸಿಲಿಂಡರ್ ಮತ್ತು ಅದರ ಪರಿಕರಗಳನ್ನು ಕುಟುಂಬವು ಇತ್ತೀಚೆಗೆ ತಂದಿತ್ತು.

ಮಾಹಿತಿ ಮೇರೆಗೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಧ್ರುವ ಕಾಂತ್ ಠಾಕೂರ್ ತಿಳಿಸಿದ್ದಾರೆ.


Share It

You cannot copy content of this page