ಬೆಂಗಳೂರು: ರಾಜ್ಯದ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ರಿಜಿಸ್ಟರ್ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬುದು ಊಹಾಪೋಹ ಎಂದು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರಾದ ಕೆ.ಎ.ದಯಾನಂದ್ ಸ್ಪಷ್ಟಪಡಿಸಿದ್ದಾರೆ.
ನೋಂದಣಿ ಲೋಪದೋಷಗಳಿಗೆ ಸಬ್ ರಿಜಿಸ್ಟ್ರಾರ್ ಗಳನ್ನು ಹೊಣೆ ಮಾಡಿ, ಶಿಕ್ಷೆ ವಿಧಿಸಲು ಮುಂದಾಗಿರುವ ಸರಕಾರದ ನಡೆಗೆ ಬೇಸತ್ತು ರಾಜ್ಯದ ಎಲ್ಲ ಬಸ್ ರಿಜಿಸ್ಟ್ರಾರ್ ಕಚೇರಿಗಳನ್ನು ಬಂದ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಇದರಿಂದಾಗಿ ಆಸ್ತಿ ನೋಂದಣಿ ಮಾಡಿಸುವವರಿಗೆ ಗಾಬರಿಯಾಗಿತ್ತು. ಇಂತಹದ್ದೊಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿ ಆತಂಕಕ್ಕೆ ಕಾರವಾಗಿತ್ತು. ಈ ಸುದ್ದಿಗೆ ಸ್ಪಷ್ಟನೆ ನೀಡಿರುವ ಆಯುಕ್ತರು, ಇಂತಹ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದಾರೆ.
ಐದಾರು ಉಪನೋಂದಣಿ ಕಚೇರಿಗಳಲ್ಲಿ ಮಾತ್ರವೇ ರಿಜಿಸ್ಟರ್ ಸ್ಥಗಿತಗೊಳಿಸಲಾಗಿತ್ತು. ಉಪನೋಂದಣಾಧಿಕಾರಿಗಳ ಜತೆಗೆ ನೇರವಾಗಿ ಚರ್ಚೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ. ಹೀಗಾಗಿ, ರಾಜ್ಯದ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲ ನೋಂದಣೊ ಸ್ಥಗಿತಗೊಂಡಿಲ್ಲ ಎಂದಿದ್ದಾರೆ.