ಪಟಾಕಿ ಕೊಂಡೊಯ್ಯುವಾಗ ಸ್ಫೋಟಗೊಂಡು ಓರ್ವ ಸಾವು: ಐವರ ಸ್ಥಿತಿ ಗಂಭೀರ
ಆಂಧ್ರಪ್ರದೇಶ: ಹಬ್ಬದ ಸಂಭ್ರಮ ಹೆಚ್ಚಿಸಲು ಕೊಂಡೊಯ್ಯುತ್ತಿದ್ದ ಪಟಾಕಿಗಳು ಸಿಡಿದು ಓರ್ವ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಈಲೂರಿನಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ದಿನವಾದ ಇಂದು ಹಬ್ಬದ ಆಚರಣೆಗೆ ಪಟಾಕಿ ಕೊಂಡುಕೊಂಡಿದ್ದ ದುರ್ಗಾಸಿ ಸುಧಾಕರ್ (40) ಹಾಗೂ ತಬಾಟಿ ಸಾಯಿ ಎಂಬುವವರು ಬೈಕ್ ನಲ್ಲಿ ತೆರಳುತ್ತಿದ್ದರು. ಈ ವಾಸಳೆ ಸ್ಪೀಡ್ ಬ್ರೇಕರ್ ಬಂದ ತಕ್ಷಣ ಚೀಲದಲ್ಲಿದ್ದ ಪಟಾಕಿಗಳು ಸಿಡಿದಿವೆ ಎನ್ನಲಾಗಿದೆ.
ಈ ವೇಳೆ ಸ್ಥಳದಲ್ಲಿ ರಸ್ತೆಯ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದ ಐವರು ಗಾಯಗೊಂಡಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಸುಧಾಕರ್ ಮೃತಪಟ್ಟಿದ್ದಾನೆ. ಪಟಾಕಿ ಚೀಲ ಹಿಡಿದು ಕುಳಿತಿದ್ದ ಮತ್ತೋರ್ವ ಸವಾರನ ಸ್ಥಿತಿ ಗಂಭೀರವಾಗಿದೆ.
ಈಲೂರು ಪಟ್ಟಣದ ತೂರು ಬೀದಿಯ ಗಂಗಮ್ಮ ಟೆಂಪಲ್ ಸರ್ಕಲ್ ನಲ್ಲಿ ನಡೆದ ಘಟನೆಯ ಸಂಬಂಧ ಈಲೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಡಿಎಸ್ ಪಿ ಶ್ರವಣ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಸತ್ಯನಾರಾಯಣ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.
ಮೇಲ್ನೋಟಕ್ಕೆ ಪಟಾಕಿ ಸಿಡಿತದಿಂದ ಘಟನೆ ನಡೆದಿದೆ ಎಂಬುದು ಗೊತ್ತಾಗಿದ್ದು, ಸಿಸಿಟಿವಿಯಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದ್ದು, ಇದೀಗ ಆ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ರಸ್ತೆ ಬದಿ ನಿಂತಿದ್ದ ಎಸ್.ಶಶಿ, ಶ್ರೀನಿವಾಸ್ ರಾವ್, ಖಾದರ್,


