ಟೀಂ ಇಂಡಿಯಾದ ಸತತ ಸೋಲು ಹಾಗೂ ನೀರಸ ಪ್ರದರ್ಶನದಿಂದ ಈ ಹಿಂದೆ ಬಿಸಿಸಿಐ ನಿರ್ಧಾರವೊಂದನ್ನು ತೆಗೆದುಕೊಂಡಿತ್ತು. ಈಗ ಜಡೇಜಾ ಆ ನಿರ್ಧಾರಕ್ಕೆ ಕಟ್ಟು ಬಿದ್ದಿದ್ದಾರೆ. ಅಷ್ಟಕ್ಕೂ ಆ ನಿರ್ಧಾರ ಏನು ಎಂಬುದನ್ನು ನೋಡೋಣ ಬನ್ನಿ.
ಭಾರತೀಯ ಸ್ಟಾರ್ ಆಲ್ರೌಂಡರ್ ಎಂದೇ ಖ್ಯಾತಿ ಪಡೆದಿರುವ ರವೀಂದ್ರ ಜಡೇಜಾ ಸದ್ಯ ಟಿ 20 ಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಬಿಸಿಸಿಐ ನಿರ್ಧಾರದ ಅನ್ವಯ ಭಾರತೀಯ ಆಟಗಾರರು ದೇಶೀಯ ಕ್ರಿಕೆಟ್ ಆಡಲೇಬೇಕು ಎಂದು ಕಟ್ಟು ನಿಟ್ಟಾಗಿ ಹೇಳಿದೆ. ಈಗ ಜಡೇಜಾ ಸೌರಾಷ್ಟ್ರ ಪರ ಆಡಲಿದ್ದಾರೆ.
ಸದ್ಯ ಜಡೇಜಾ ರಾಜ್ ಕೋಟ್ ನಲ್ಲಿ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. 2023 ರಲ್ಲಿ ತಮಿಳುನಾಡಿದ ವಿರುದ್ಧ ಕೊನೆಯ ರಣಜಿ ಪಂದ್ಯವನ್ನು ಆಡಿದ್ದರು.
ಜೊತೆಗೆ ಭಾರತದ ಪರ ಆಡಿದ ಇತ್ತೀಚಿನ ಪಂದ್ಯಗಳಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದರು. ಆದರೆ ಭಾರತ ತಂಡ ಸಾಲು ಸಾಲು ಸೋಲುಗಳನ್ನು ಎದುರಿಸಬೇಕಾಯಿತು. ಜಡೇಜಾ ಬಿಟ್ಟು ಉಳಿದವರು ಇತರೆ ಟೀಂ ಗಳಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ದೆಹಲಿ ಟೀಮ್ ನಲ್ಲಿ ಪಂತ್ ಆಡುವ ಸಾಧ್ಯತೆ ಇದೇ ಎಂದು ವರದಿಯಾಗುತ್ತಿದೆ.
ಇದನ್ನು ಓದಿ: ಇಂಗ್ಲೆಂಡ್ ವಿರುದ್ಧದ ಸೇಡಿಗೆ ತಕ್ಕ ಪಾಠ ಕಲಿಸಲು ಭಾರತದ ರಣ ತಂತ್ರ