ರಾಜ್ಯದಲ್ಲಿರುವ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ಈಗಾಗಲೇ ಖಾಲಿ ಇರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿಯನ್ನು ಕರೆದಿದ್ದು ಅಭ್ಯರ್ಥಿಯ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಿದೆ. ಈಗಾಗಲೇ ಅರ್ಜಿಯು ಆರಂಭವಾಗಿದ್ದು ಇಂದೇ ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸುವ ವಿಧಾನವನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ.
ಅರ್ಜಿಯ ವಿವರ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ – 19-09-2024
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ – 28-09-2024
ಆನ್ಲೈನ್ ಮೂಲಕ ಅರ್ಜಿಯ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ – 29-09-2024
ಹುದ್ದೆಗಳ ವಿವರಗಳು
- ಟೆಕ್ನೀಷಿಯನ್ ಗ್ರೇಡ್ 3 : 23
- ಲೆಕ್ಚರರ್ (ಇಂಜಿನಿಯರಿಂಗ್) : 30
- ಇಂಜಿನಿಯರ್ : 2
- ಟೆಕ್ನೀಷಿಯನ್ ಗ್ರೇಡ್ 4 : 4
- ಅಸಿಸ್ಟಂಟ್ ಗ್ರೇಡ್ 2 : 5
- ಟೆಕ್ನೀಷಿಯನ್ ಗ್ರೇಡ್ 2: 8
- ಇನ್‌ಸ್ಟ್ರಕ್ಟರ್ ಗ್ರೇಡ್ 2: 5
- ಫೋರ್ಮನ್ ಗ್ರೇಡ್ 2 : 4
- ಆಫೀಸರ್ ಗ್ರೇಡ್ 2 : 2
- ಇನ್‌ಸ್ಟ್ರಕ್ಟರ್ ಗ್ರೇಡ್ 1 : 15
ಹುದ್ದೆಗಳಿಗೆ ನಿಗದಿ ಪಡಿಸಿದ ವೇತನಗಳ ವಿವರ ಕೆಳಗಿನಂತಿದೆ.
- ಟೆಕ್ನೀಷಿಯನ್ ಗ್ರೇಡ್ – Rs.27650-52650
- ಲೆಕ್ಚರರ್ (ಇಂಜಿನಿಯರಿಂಗ್) – Rs.45300-88300
- ಇಂಜಿನಿಯರ್ : Rs.45300-88300
- ಟೆಕ್ನೀಷಿಯನ್ ಗ್ರೇಡ್- Rs.23500-47650.
- ಅಸಿಸ್ಟಂಟ್ ಗ್ರೇಡ್ – Rs.27650-52650.
- ಟೆಕ್ನೀಷಿಯನ್ ಗ್ರೇಡ್ – Rs.30350-58250
- ಇನ್‌ಸ್ಟ್ರಕ್ಟರ್ ಗ್ರೇಡ್ – Rs.30350-58250
- ಫೋರ್ಮನ್ ಗ್ರೇಡ್ – Rs.37900-70850
- ಆಫೀಸರ್ ಗ್ರೇಡ್ – Rs.40900-78200
- ಇನ್‌ಸ್ಟ್ರಕ್ಟರ್ ಗ್ರೇಡ್ – Rs.30350-58250
ಹುದ್ದೆಗಳನ್ನು ಪಡೆಯಲು ಅರ್ಹತೆಗಳು
ಪ್ರತಿ ಹುದ್ದೆಗೂ ತನ್ನದೇ ಆದ ಅರ್ಹತೆಯನ್ನು ಹೊಂದಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಅಸಿಸ್ಟಂಟ್ ಗ್ರೇಡ್ 2 : ಪದವಿಯ ಜತೆಗೆ ಕಂಪ್ಯೂಟರ್ ಶಿಕ್ಷಣ.
- ಇನ್‌ಸ್ಟ್ರಕ್ಟರ್ ಗ್ರೇಡ್ 2: ಡಿಪ್ಲೊಮ ಇನ್ ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್.
- ಇನ್‌ಸ್ಟ್ರಕ್ಟರ್ ಗ್ರೇಡ್ 1 : ಡಿಪ್ಲೊಮ ಇನ್ ಟೂಲ್ ಅಂಡ್ ಡೈ ಮೇಕಿಂಗ್
- ಟೆಕ್ನೀಷಿಯನ್ ಗ್ರೇಡ್ 2: ಡಿಪ್ಲೊಮ ಇನ್ ಟೂಲ್ ಅಂಡ್ ಡೈ ಮೇಕಿಂಗ್
- ಆಫೀಸರ್ ಗ್ರೇಡ್ 2 : ಪದವಿ ಜತೆಗೆ ಕಂಪ್ಯೂಟರ್ ಶಿಕ್ಷಣ.
6.ಫೋರ್ಮನ್ ಗ್ರೇಡ್ 2 : ಡಿಪ್ಲೊಮ, ಜಿಟಿಟಿಸಿ ನಿಗದಿತ ಕಾರ್ಯಾನುಭವ.
- ಟೆಕ್ನೀಷಿಯನ್ ಗ್ರೇಡ್ 4 : ಐಟಿಐ ಇನ್ ಇಲೆಕ್ಟ್ರಿಕಲ್, ಮೆಕ್ಯಾನಿಕಲ್.
- ಇಂಜಿನಿಯರ್ : ಮೆಕ್ಯಾನಿಕಲ್ ಇಂಜಿನಿಯರಿಂಗ್ ಜತೆಗೆ, ಕಂಪ್ಯೂಟರ್ ಶಿಕ್ಷಣ.
- ಲೆಕ್ಚರರ್ (ಇಂಜಿನಿಯರಿಂಗ್) : ಮೆಕ್ಯಾನಿಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಮಾಸ್ಟರ್ ಡಿಗ್ರಿ ಪೂರ್ಣ.
- ಟೆಕ್ನೀಷಿಯನ್ ಗ್ರೇಡ್ 3 : ವಿವಿಧ ಬ್ರ್ಯಾಂಚ್‌ನಲ್ಲಿ ಡಿಪ್ಲೊಮ ಪೂರ್ಣ.
ವಯೋಮಿತಿ
ಇಂಜಿನಿಯರ್, ಫೋರ್ಮನ್ ಗ್ರೇಡ್ 2, ಆಫೀಸರ್ ಗ್ರೇಡ್ 2, ಗ್ರೇಡ್ 3 ಹುದ್ದೆಗೆ ಕನಿಷ್ಠ 21 ವರ್ಷ ಆಗಿರಬೇಕು. ಇತರ ಹುದ್ದೆಗಳಿಗೆ 18 ವರ್ಷ ತುಂಬಿದ್ದರೆ ಸಾಕು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ ವಯಸ್ಸು 30 ವರ್ಷ. ಇತರೆ ಹಿಂದುಳಿದ ವರ್ಗಕ್ಕೆ 33 ಹಾಗೂ ST, SC ಮತ್ತು ಪ್ರವರ್ಗ-1 35 ವರ್ಷ ವಯೋಮಿತಿಯನ್ನು ನಿಗದಿ ಪಡಿಸಿದೆ.
ಅರ್ಜಿಯ ಪಾವತಿ
ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 750 ಅರ್ಜಿಯ ಶುಲ್ಕ, ಎಸ್‌ಸಿ / ಎಸ್‌ಟಿ / ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಂಗವಿಕಲರಿಗೆ ರೂ 500. ವಿಕಲಚೇತನರಿಗೆ 250. ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ