ಬೆಂಗಳೂರು: ವಿಜಯೇಂದ್ರ ಅವರನ್ನು ಬಿಟ್ಟು ಬೇರೆ ಯಾರಾದರೂ ಪಕ್ಷದ ಅಧ್ಯಕ್ಷರಾಗಲೀ, ನಾವು ಪಕ್ಷ ಸಂಘಟನೆಗೆ ಅವರ ಜತೆಗೆ ಹಗಲಿರುಳು ದುಡಿಯುತ್ತೇವೆ ಎಂದು ಬಿಜೆಪಿ ಅತೃಪ್ತ ಬಣ ಹೈಕಮಾಂಡ್ ಮುಂದೆ ತಮ್ಮ ತಮ್ಮ ಹಕ್ಕೊತ್ತಾಯ ಮಾಡಿದೆ.
ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಅತೃಪ್ತ ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಿಜಯೇಂದ್ರ ವಿರುದ್ಧ ದೂರಿನ ಸುರಿಮಳೆಗರೆದರು. ಈ ವೇಳೆ ವಿಜಯೇಂದ್ರ ಹೊರತುಪಡಿಸಿ ಬೇರೆ ಯಾರನ್ನಾದರೂ ರಾಜ್ಯಾಧ್ಯಕ್ಷನನ್ನಾಗಿ ಮಾಡಿ. ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಾವ್ಯಾರು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲ. ಆದರೆ, ವಿಜಯೇಂದ್ರ ಅವರ ನಡೆಯಿಂದ ಬಹಳಷ್ಟು ನಾಯಕರು ಅಸಮಾಧಾನಿತರಾಗಿದ್ದಾರೆ. ಹೀಗಾಗಿ, ಅವರ ನೇತೃತ್ವದಲ್ಲಿ ಪಕ್ಷ ಮುಂದೆ ಹೋದರೆ, ಪಕ್ಷಕ್ಕೆ ಸೊಡ್ಡ ಹಿನ್ನಡೆಯಾಗಲಿದೆ ಎಂದು ದೂರಿತ್ತರು.
Updating…